35 ಸೊಮಾಲಿಯನ್ ಕಡಲ್ಗಳ್ಳರನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ ನೌಕಾಪಡೆ

ಮಾರ್ಚ್ 15 ರಂದು ಐಎನ್‌ಎಸ್ ಕೋಲ್ಕತ್ತಾದಲ್ಲಿ ಎಂವಿ ರುಯೆನ್ ಹಡಗನ್ನು ಪತ್ತೆ ಮಾಡಿ, ಅದರಲ್ಲಿದ್ದ ಜನರನ್ನು ರಕ್ಷಣೆ ಮಾಡಿದೆ. ಇದರ ಜತೆಗೆ ಈ ಹಡಗಿನ ಪತ್ತೆಗಾಗಿ ಬಳಸಿದ್ದ ಭಾರತೀಯ ಡ್ರೋನ್​​ನ್ನು ಕಡಲ್ಗಳ್ಳರು ಹೊಡೆದುರುಳಿಸಿದರು. ಇನ್ನು ಈ ರಕ್ಷಣಾ ಕಾರ್ಯಚರಣೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಹೇಳಲಾಗಿದೆ. ಇದೀಗ ಬಂಧನವಾಗಿರುವ 35 ಕಡಲ್ಗಳ್ಳರನ್ನು ಮುಂಬೈಗೆ ತರಲಾಗಿದೆ.

ಈ ಹಡಗನ್ನು 2023 ಡಿಸೆಂಬರ್​​ನಲ್ಲಿ ಅಪಹರಣ ಮಾಡಲಾಗಿತ್ತು. ಭಾರತೀಯ ನೌಕಾಪಡೆಯು ಸಮುದ್ರ ಭದ್ರತಾ ಕಾರ್ಯಾಚರಣೆಗಳ ಭಾಗವಾಗಿ ಈ ಸಮುದ್ರದಲ್ಲಿ ಭಾರೀ ಕಾರ್ಯಚರಣೆಯನ್ನು ನಡೆಸಿ, MV ರುಯೆನ್ ಹಡಗುನ್ನು ರಕ್ಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸೊಮಾಲಿಯಾದಿಂದ ಪೂರ್ವಕ್ಕೆ 260 ನಾಟಿಕಲ್ ಮೈಲಿ (ಎನ್‌ಎಂ) ದೂರದಲ್ಲಿ ಹಡಗನ್ನು ತಡೆಹಿಡಿಯಲು ಐಎನ್‌ಎಸ್ ಕೋಲ್ಕತ್ತಾಗೆ ನಿರ್ದೇಶನ ನೀಡಿತ್ತು. ಈ ಮೂಲಕ 35 ಕಡಲ್ಗಳ್ಳರನ್ನು ಪತ್ತೆ ಮಾಡಲಾಗಿತ್ತು.

Latest Indian news

Popular Stories