ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಂಗಳವಾರ ಗಾಜಾಕ್ಕೆ ಅಪರೂಪದ ಭೇಟಿ ನೀಡಿದರು.
ಅಲ್ಲಿ ಅವರು ಮಾತನಾಡುತ್ತಾ, “ಯುದ್ಧ ಮುಗಿದ ನಂತರ ಹಮಾಸ್ ಮತ್ತೆ ಪ್ಯಾಲೆಸ್ತೀನ್ ಎನ್‌ಕ್ಲೇವ್ ಅನ್ನು ಆಳುವುದಿಲ್ಲ ಎಂದು ಹೇಳಿದರು. ಹಮಾಸ್’ನ್ನು ನಿರ್ನಾಮ ಮಾಡುವ ತನ್ನ ಪ್ರತಿಜ್ಞೆಯನ್ನು ಅವರು ಪುನರುಚ್ಚರಿಸಿದರು. ಇಸ್ರೇಲಿ ಸಶಸ್ತ್ರ ಪಡೆಗಳು ಹಮಾಸ್‌ನ ಮಿಲಿಟರಿ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ನಾಶಪಡಿಸಿವೆ ಎಂದು ಹೇಳಿದರು.
ನೆತನ್ಯಾಹು, ಯುದ್ಧದ ಉಡುಪನ್ನು ಮತ್ತು ಬ್ಯಾಲಿಸ್ಟಿಕ್ ಹೆಲ್ಮೆಟ್‌ನಲ್ಲಿ ಕಾಣಿಸಿಕೊಂಡರು. ಗಾಜಾದ ಕಡಲತೀರದ ಸ್ಥಳದಲ್ಲಿ ನಿಂತು ವೀಡಿಯೊವನ್ನು ರೆಕಾರ್ಡ್ ಮಾಡಿದರು
“ಹಮಾಸ್ ಹಿಂತಿರುಗುವುದಿಲ್ಲ” ಎಂದ ಅವರು ಸೆರೆಯಲ್ಲಿರುವ ಇಸ್ರೇಲಿ ಒತ್ತೆಯಾಳುಗಳ ಬಗ್ಗೆ ಮಾತನಾಡಿದರು. ಗಾಜಾದಲ್ಲಿ ಇನ್ನೂ ನಾಪತ್ತೆಯಾಗಿರುವ 101 ಇಸ್ರೇಲಿ ಒತ್ತೆಯಾಳುಗಳ ಹುಡುಕಾಟ ಮುಂದುವರಿಯಲಿದೆ ಎಂದು ಪ್ರಧಾನಿ ನೆತನ್ಯಾಹು ಹೇಳಿದ್ದಾರೆ. ಪ್ರತಿ ಒತ್ತೆಯಾಳನ್ನು ಹಿಂದಿರುಗಿಸಲು ಅವರು $ 5 ಮಿಲಿಯನ್ ಬಹುಮಾನವನ್ನು ಸಹ ಘೋಷಿಸಿದ್ದಾರೆ.
“ಒತ್ತೆಯಾಳುಗಳಿಗೆ ಹಾನಿ ಉಂಟು ಮಾಡುವವರನ್ನು ಬೇಟೆಯಾಡುತ್ತೇವೆ” ಎಂದು ನೆತಾಹನ್ಯು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್‌ನ ಮಿಲಿಟರಿಯಿಂದ ನಡೆಯುತ್ತಿರುವ ನೆಲದ ಮೇಲಿನ ಕಾರ್ಯಾಚರಣೆಯ ಚಟುವಟಿಕೆಗಳ ಪ್ರತ್ಯಕ್ಷ ಬ್ರೀಫಿಂಗ್ ಪಡೆಯಲು ಗಾಜಾಕ್ಕೆ ಭೇಟಿ ನೀಡಿದ್ದಾರೆ. ರಕ್ಷಣಾ ಸಚಿವರು ಮತ್ತು ಸೇನಾ ಮುಖ್ಯಸ್ಥರು ಅವರ ಜೊತೆಗಿದ್ದರು.