ಕ್ರೌರ್ಯ: ರಫಾ ಸ್ಟ್ರೈಕ್ ನಂತರ ಇಸ್ರೇಲಿ ಬಾಂಬ್‌ಗಳ ಮೇಲೆ “ಫಿನ್ನಿಷ್ ದೆಮ್” ಬರೆದ ನಿಕ್ಕಿ ಹ್ಯಾಲಿ!

ವಾಷಿಂಗ್ಟನ್: ಮಾಜಿ ಯುಎಸ್ ಅಧ್ಯಕ್ಷೀಯ ಆಕಾಂಕ್ಷಿ ನಿಕ್ಕಿ ಹ್ಯಾಲೆ ಅವರು ಲೆಬನಾನ್‌ನ ಉತ್ತರದ ಗಡಿಯ ಸಮೀಪವಿರುವ ಪ್ರದೇಶಗಳಿಗೆ ಭೇಟಿ ನೀಡಿ ಇಸ್ರೇಲಿ ಶೆಲ್‌ನಲ್ಲಿ “ಫಿನಿಶ್ ದೆಮ್” ಎಂದು ಬರೆಯುತ್ತಿರುವ ಫೋಟೋ ವೈರಲಾಗಿದೆ.

ಹೇಲಿ ಅವರ ಭೇಟಿಯಲ್ಲಿ ಅವರ ಜೊತೆಗಿದ್ದ ಇಸ್ರೇಲಿ ಸಂಸತ್ತಿನ ಸದಸ್ಯ ಮತ್ತು ವಿಶ್ವಸಂಸ್ಥೆಯ ಮಾಜಿ ರಾಯಭಾರಿ ಡ್ಯಾನಿ ಡ್ಯಾನನ್ ಅವರು ಮಂಗಳವಾರ X ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

‘ಫಿನಿಶ್ ದೆಮ್’ ಇದು ಮಾಜಿ ರಾಯಭಾರಿ ನಿಕ್ಕಿ ಹ್ಯಾಲಿ ಬರೆದದ್ದು” ಎಂದು ಡ್ಯಾನನ್ ತನ್ನ ಪೋಸ್ಟ್‌ನಲ್ಲಿ ಹೇಳಿದ್ದು, ಮಂಡಿಯೂರಿ ಹ್ಯಾಲಿ ನೇರಳೆ ಮಾರ್ಕರ್ ಪೆನ್‌ನೊಂದಿಗೆ ಶೆಲ್‌ನಲ್ಲಿ ಬರೆಯುತ್ತಿರುವುದು ಕಂಡು ಬಂದಿದೆ.

ಡೋನಾಲ್ಡ್ ಟ್ರಂಪ್ ಅವಧಿಯಲ್ಲಿ ನಿಕ್ಕಿ ಯುಎನ್ ರಾಯಭಾರಿಯಾಗಿದ್ದರು.

Latest Indian news

Popular Stories