ಪ್ರಧಾನಿ ಮೋದಿಯವರ ಮುಂದೆ ಹಿಂದಿನ ಕಾಂಗ್ರೆಸ್ ಸರಕಾರವನ್ನು ಹೊಗಳಿದ ನಿತೀಶ್ ಕುಮಾರ್ – ಶೀಘ್ರ ಪಲ್ಟಿ ಹೊಡೆಯಲಿದ್ದಾರೆ ಎಂದ ನೆಟ್ಟಿಗರು!

ಕೇಂದ್ರದಲ್ಲಿ NDA ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಏನಾದರೂ ನಡೆಯಲಿದೆಯೇ ಎಂದು ಕಾತರದಿಂದ ಕಾಯುತ್ತಿರುವವರಿಗೆ ಮೈತ್ರಿ ಪಕ್ಷಗಳ ಪ್ರತಿಯೊಂದು ನಡೆ, ಮಾತು ಕುತೂಹಲ ಮೂಡಿಸುತ್ತದೆ.

ಇದೀಗ ಬಿಹಾರದ ನಲಂದಾ ವಿಶ್ವವಿದ್ಯಾಲಯ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ಮೋದಿಯವರ ಮುಂದೆಯೇ 2010 ರಲ್ಲಿ ಯಾವ ರೀತಿ ಯುಪಿಯ (ಕಾಂಗ್ರೆಸ್) ಸರಕಾರ ವಿಶ್ವವಿದ್ಯಾಲಯಕ್ಕೆ ಅಡಿಪಾಯ ಹಾಕಿದೆ ಎಂಬುವುದನ್ನು ನೆನಪಿಸುವ ಮೂಲಕ ಈ ಯೋಜನೆಯನ್ನು ಕಾಂಗ್ರೆಸ್ ಆರಂಭಿಸಿತ್ತು ಎಂಬುವುದನ್ನು ಮೋದಿಯ ಎದುರೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಸ್ತಾಪಿಸಿ ಅಚ್ಚರಿ ಉಂಟು ಮಾಡಿದ್ದಾರೆ.

2014 ರ ನಂತರದ ಬೆಳವಣಿಗೆಯನ್ನು ಕೂಡ ಉಲ್ಲೇಖಿಸಿರುವುದನ್ನು ಅವರ ಮಾತಿನಲ್ಲಿ ಕೇಳ ಬಹುದಾಗಿದೆ. ಇನ್ನು ಅವರ ಮಾತಿನ ಕುರಿತು ನೆಟ್ಟಿಗರು ಸ್ವಾರಸ್ಯಕರ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದು “ಪಲ್ಟು ಕುಮಾರ್” ಶೀಘ್ರ ಪಲ್ಟಿ ಹೊಡೆಯುವ ಸಾಧ್ಯತೆ ಇದೆ ಎಂದು ಕಾಲೆಳೆದಿದ್ದಾರೆ. ಈ ಬಾರಿಯ ಕೇಂದ್ರ NDA ಸರಕಾರ ಸಂಪೂರ್ಣವಾಗಿ ಎರಡು ಜಾತ್ಯತೀತ ಪಕ್ಷಗಳ ಕಪಿಮುಷ್ಠಿಯಲ್ಲಿದ್ದು ಒಂದು ವೇಳೆ TDP ಅಥವಾ JDU ತಮ್ಮ ಬೆಂಬಲ ಹಿಂಪಡೆದರೆ ಸರಕಾರ ಬೀಳುವ ಸಾಧ್ಯತೆ ಇರುವುದರಿಂದ ನಿತೀಶ್ ಮತ್ತು ಚಂದ್ರ ಬಾಬು ನಾಯ್ಡು ಅವರ ಪ್ರತಿ ಮಾತು, ಹೇಳಿಕೆಯ ಮೇಲೆ ಜನ ಕಣ್ಣೀಟ್ಟಿದ್ದಾರೆ.

Latest Indian news

Popular Stories