ನನ್ನ ಹೇಳಿಕೆಯಿಂದ ಯಾವುದೇ ಹಾನಿ ಆಗಿಲ್ಲ. ಯೋಗೇಶ್ವರ್ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ: ಸಚಿವ ಜಮೀರ್

ಮಂಗಳೂರು: ಕೇಂದ್ರ ಸಚಿವ ಮತ್ತು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರನ್ನು ‘ಕರಿಯಾ’ ಎಂದು ಕರೆದಿರುವುದರಿಂದ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಯಾವುದೇ ಹಾನಿ ಆಗಿಲ್ಲ ಎಂದು ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಶನಿವಾರ ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆಯಿಂದ ಚುನಾವಣೆಯಲ್ಲಿ ಒಂದಿಷ್ಟು ಲಾಭವೂ ಆಗಿದೆ ಒಂದಷ್ಟು ನಷ್ಟವೂ ಆಗಿದೆ. ಮುಸ್ಲಿಂ ಮತಗಳನ್ನು ಸೆಳೆದರೆ, ಇನ್ನೋಂದು ಸಮುದಾಯದಕ್ಕೆ ನೋವಾಗಿ ಮತ ಬಂದಿಲ್ಲದಿರಬಹುದು” ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರು ಹೇಳಿದ್ದರು.

ಇಂದು ಮಂಗಳೂರಿನಲ್ಲಿ ಸಿಪಿ ಯೋಗೇಶ್ವರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್, ನನ್ನ ಹೇಳಿಕೆಯಿಂದ ಯಾವುದೇ ಹಾನಿ ಆಗಿಲ್ಲ. ಯೋಗೇಶ್ವರ್ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಹೇಳಿದರು.

“ಜಮೀರ್‌ ಮಾತನ್ನು ವಯಕ್ತಿಕವಾಗಿ ಖಂಡಿಸುತ್ತೇನೆ. ಸಮುದಾಯಕ್ಕೆ ಹಾನಿಯಾಗಿದೆ. ಜೆಡಿಎಸ್‌ನವರು ನನಗೆ ಮತ ಹಾಕಬೇಕು ಎಂದು ಇದ್ದರು. ಆದರೆ, ಜಮೀರ್‌ ಅವರ ಹೇಳಿಕೆಯಿಂದ ಒಟ್ಟಾಗಿ ಮತ್ತೆ ಜೆಡಿಎಸ್‌ಗೆ ಮತ ಹಾಕಿದ್ದಾರೆ. ನನಗೆ ಹಿನ್ನಡೆಯಾಗಿದೆ ” ಎಂದು ಸಿಪಿ ಯೋಗೇಶ್ವರ್ ಗುರುವಾರ ಹೇಳಿದ್ದರು.

Latest Indian news

Popular Stories