ಚಿತ್ರ: ಪ್ರಜಾವಣಿ ಪತ್ರಿಕೆಯ ವರದಿ
ಎಷ್ಟೇ ಸದುದ್ದೇಶದಿಂದ ಕೂಡಿದ್ದರೂ ಡಿಸಿ ಕಚೇರಿಯಲ್ಲಿ ಗಣೇಶ ಪ್ರತಿಮೆ ಸ್ಥಾಪಿಸಿದ ನಿಮ್ಮ ನಡೆ ಅಪಾಯಕಾರಿ ಮತ್ತು ಸಂವಿಧಾನದ ಆಶಯಗಳಿಗೆ ಧಕ್ಕೆ ತರುವಂತದ್ದಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಉದ್ದೇಶಿಸಿ ಸಮಾಜಿಕ ಜಾಲತಾಣದಲ್ಲಿ ಸಾಮಾಜಿಕ ಕಾರ್ಯಕರ್ತ ಶಿವಸುಂದರ್ ಪೋಸ್ಟ್ ಹಾಕಿದ್ದಾರೆ.
ಈ ವಿಚಾರವಾಗಿ ಮೂರು ಅಂಶಗಳ ಮೇಲೆ ಬೆಳಕು ಚೆಲ್ಲಿ ಸಾಮಾಜಿಕ ಪೋಸ್ಟ್ ಹಾಕಿದ್ದಾರೆ.
1. ಸರ್ಕಾರಿ ಕಚೇರಿಗಳು ಮತಧರ್ಮಗಳ ಆಚರಣೆಯ ಕೇಂದ್ರಗಳಲ್ಲ. ಅಲ್ಲಿ ಯಾವುದೇ ಒಂದು ಧರ್ಮದ ದೇವರ ಪ್ರತಿಮೆಗಳನ್ನು ಸ್ಥಾಪಿಸುವುದು ಭಾರತದ ಸರ್ವಧರ್ಮ ಸಮಭಾವ ರೂಪಿ ಸೆಕ್ಯುಲಾರ್ ಆಶಯಗಳಿಗೂ ಕೂಡ ವಿರುದ್ಧವಾದಾದುದು.
2. ಒಬ್ಬ ಸರ್ಕಾರಿ ಅಧಿಕಾರಿ ಸರ್ಕಾರಿ ಕಚೇರಿಯಲ್ಲಿ ಗಣೇಶನ ಪ್ರತಿಮೆ ಸ್ಥಾಪಿಸುವುದು ಭಾರತೀಯರೆಲ್ಲಾ ಹಿಂದೂಗಳೇ ಎಂಬ ಸಂಘಿ ಹಿಂದೂತ್ವವಾದಿಗಳ ಕೋಮುವಾದಿ ಪ್ರಚಾರಕ್ಕೆ ಮತ್ತಷ್ಟು ಅಧಿಕೃತ ಮಾನ್ಯತೆ ತಂದುಕೊಂಡುತ್ತದೆ.
3. ಒಬ್ಬ ಮುಸ್ಲಿಂ ಅಧಿಕಾರಿ ಹಿಂದೂ ದೇವರ ಪೂಜೆ ಮಾಡಿದ್ದು ಮೇಲ್ನೋಟಕ್ಕೆ ಸೆಕ್ಯುಲಾರ್ ಎಂದು ಮೆಚ್ಚುಗೆಗೆ ಪಾತ್ರವಾದರೂ, ಇದನ್ನು ಮಾದರಿಯಾಗಿ ಮುಂದಿಡುತ್ತಾ ಮುಸ್ಲಿಮರ ಮೇಲೆ ಮಾತ್ರ ಅನಗತ್ಯ ಮತ್ತು ಅನಪೇಕ್ಷಣೀಯ ಒತ್ತಡವನ್ನು ಅದು ಹುಟ್ಟುಹಾಕುತ್ತದೆ.
ಹೀಗಾಗಿ ತಮ್ಮದು ಸದುದ್ದೇಶವೇ ಆಗಿದ್ದರೂ, ದೇಶದ ಸಂವಿಧಾನವನ್ನು ಪಾಲಿಸಬೇಕಾದ ಅಧಿಕಾರಿಯಾಗಿ ನಿಮ್ಮ ನಡೆ ಖಂಡಿತಾ ಸರಿಯಲ್ಲ ಎಂದು ಶಿವಸುಂದರ್ ತಿಳಿಸಿದ್ದಾರೆ.