ʻಸಬ್ಕಾ ಸಾಥ್, ಸಬ್ಕಾ ವಿಕಾಸ್ʼ ಮತ್ತು ಅಲ್ಪಸಂಖ್ಯಾತ ಮೋರ್ಚಾ ಅಗತ್ಯವಿಲ್ಲ – ಬಿಜೆಪಿ ಮುಖಂಡ ಸುವೆಂದು ಅಧಿಕಾರಿ ವಿವಾದ!

ಕೋಲ್ಕತ್ತಾ: ಪಕ್ಷದಲ್ಲಿರುವ ಅಲ್ಪಸಂಖ್ಯಾತ ವಿಭಾಗವನ್ನು ವಿಸರ್ಜಿಸಬೇಕು, ಪ್ರಧಾನಿ ನರೇಂದ್ರ ಮೋದಿ (PM Modi) ಅವರು ನೀಡಿದ ʻʻಸಬ್ಕಾ ಸಾಥ್, ಸಬ್ಕಾ ವಿಕಾಸ್ʼʼ (Stop Sabka Saath, Sabka Vikas) ಘೋಷಣೆ ನಿಲ್ಲಿಸುವ ಸಮಯ ಬಂದಿದೆ ಎಂದು ಪಶ್ಚಿಮ ಬಂಗಾಳದ ವಿಪಕ್ಷ ನಾಯಕ ಮತ್ತು ಬಿಜೆಪಿ ನಾಯಕ ಸುವೇಂದು ಅಧಿಕಾರಿ (Suvendu Adhikari) ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ ನಡೆದ ರಾಜ್ಯ ಬಿಜೆಪಿ (BJP) ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆಯಲ್ಲಿ ಬಹುಮತ ಕಳೆದುಕೊಂಡ ನಂತರ ಪಕ್ಷವು ಮುನ್ನಡೆಯಲು ‘ಜೋ ಹಮಾರೆ ಸಾಥ್, ಹಮ್ ಉಂಕೆ ಸಾಥ್’ (ಯಾರು ನಮ್ಮೊಂದಿಗಿದ್ದಾರೆ, ಅವರೊಂದಿಗೆ ನಾವಿದ್ದೇವೆ) (Jo Hamare Saath, Hum Unke Saath) ಎಂಬ ಹೊಸ ಘೋಷಣೆ ನೀಡಬೇಕು ಎಂದು ಕರೆ ನೀಡಿದ್ದಾರೆ.

ʻಸಬ್ಕಾ ಸಾಥ್, ಸಬ್ಕಾ ವಿಕಾಸ್ʼ ಎಂದು ನಮ್ಮ ನಾಯಕರು ಹೇಳುತ್ತಾರೆ. ಆದರೆ ನಾನು ಇನ್ಮುಂದೆ ಇದನ್ನ ಹೇಳಲ್ಲ. ಬದಲಿಗೆ ʻಜೋ ಹಮಾರೆ ಸಾಥ್, ಹಮ್ ಉಂಕೆ ಸಾಥ್ʼ ಎಂದು ಹೇಳುತ್ತೇವೆ. ʻಸಬ್ಕಾ ಸಾಥ್, ಸಬ್ಕಾ ವಿಕಾಸ್ʼ ಮತ್ತು ಅಲ್ಪಸಂಖ್ಯಾತ ಮೋರ್ಚಾ ಅಗತ್ಯವಿಲ್ಲ, ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ‌.

ಬಂಗಾಳದ 42 ಲೋಕಸಭಾ ಸ್ಥಾನಗಳ ಪೈಕಿ 30 ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ಗುರಿಗೆ ಅಲ್ಪಸಂಖ್ಯಾತ ಸಮುದಾಯವು ಪ್ರಮುಖ ಅಡ್ಡಿಯಾಗಿ ಹೊರಹೊಮ್ಮಿದೆ ಎಂದು ಮತದಾನದ ವಿಶ್ಲೇಷಣೆ ಬೆನ್ನಲ್ಲೇ ಸುವೇಂದು ಅವರಿಂದ ಈ ಹೇಳಿಕೆ ಬಂದಿದೆ. ಹಿಂದಿನ ಚುನಾವಣೆಯಲ್ಲಿ 18 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಕೇವಲ 12 ಸ್ಥಾನಗಳನ್ನು ಗೆದ್ದುಕೊಂಡಿದೆ.

Latest Indian news

Popular Stories