ಪಾಕ್ ಪರ ಘೋಷಣೆ ಕೂಗಿಲ್ಲ : ಆರೋಪಿಗಳು ತಮ್ಮ ನಿಲುವಿನಲ್ಲಿ ಧೃಡ

ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ಬಂಧನಕ್ಕೊಳಗಾಗಿರುವ ಮೂವರೂ ವಿಚಾರಣೆ ವೇಳೆ ತಪ್ಪೊಪ್ಪಿಕೊಳ್ಳಲು ನಿರಾಕರಿಸಿದ್ದಾರೆ ಎಂಬ ಮಾಹಿತಿಯನ್ನು ಲಭ್ಯವಾಗಿದೆ.

ಪ್ರಕರಣ ಸಂಬಂಧ ಹಾವೇರಿ ಜಿಲ್ಲೆಯ ಬ್ಯಾಡಗಿಯ ಮೊಹಮ್ಮದ್ ಶಫಿ ನಾಶಿಪುಡಿ (35), ಬೆಂಗಳೂರಿನ ಜಯಮಹಲ್‌ನ ಮುನಾವರ್ ಅಹಮದ್ (29) ಮತ್ತು ದೆಹಲಿಯ ಕೃಷ್ಣಗಂಜ್‌ನ ಮೊಹಮ್ಮದ್ ಇಲ್ತಾಜ್ (31) ಎಂಬುವರನ್ನು ಕೇಂದ್ರ ವಿಭಾಗದ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಮೂವರೂ ವಿಚಾರಣೆ ವೇಳೆ ನಾವು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿಲ್ಲ. ನಮ್ಮ ನಾಯಕನ ಪರವಾಗಿ ಅಷ್ಟೇ ಘೋಷಣೆ ಕೂಗಿದ್ದೇವೆಂದು ಹೇಳಿದ್ದಾರೆಂದು ತಿಳಿದುಬಂದಿದೆ.

ಫೆ.27ರಂದು ನಮ್ಮ ನಾಯಕನ ಗೆಲುವಿನ ಸಂಭ್ರಮಾಚರಣೆಗಾಗಿಯೇ ನಾವು ವಿಧಾನಸೌಧಕ್ಕೆ ಬಂದಿದ್ದೆವು. ನಾಸೀರ್ ಅವರ ಗೆಲುವು ಹಿನ್ನೆಲೆಯಲ್ಲಿ ನಾಸೀರ್ ಸಾಬ್ ಜಿಂದಾಬಾದ್ ಮತ್ತು ನಾಸೀರ್ ಹುಸೇನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದೆ. ಆದರೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿಲ್ಲ. ನಾನು ಅಂತಹ ದೇಶವಿರೋಧಿ ಘೋಷಣೆಗಳನ್ನು ಕೂಗಿಲ್ಲ. ಸ್ಥಳದಲ್ಲಿದ್ದ ಯಾರೂ ಕೂಡ ಘೋಷಣೆ ಕೂಗಿಲ್ಲ ಯಾರಾದರೂ ಅಂತಹ ಘೋಷಣೆಗಳನ್ನು ಕೂಗಿದ್ದರೆ, ಕಠಿಣ ಶಿಕ್ಷೆಯಾಗಬೇಕು ಮೊಹಮ್ಮದ್ ಶಫಿ ನಾಶಿಪುಡಿ ಹೇಳಿದ್ದಾನೆಂದು ವರದಿಗಳು ತಿಳಿಸಿವೆ.

Latest Indian news

Popular Stories