“ಗಾಝಾದ ನೋವು ನಿಲ್ಲಿಸಲು” ಜಗತ್ತು ಮಾತನಾಡಲಿ – ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ

ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಜೈ ಅವರು ಗಾಜಾದಲ್ಲಿನ ಜನರ “ಅನಾವಶ್ಯಕವಾದ ಸಂಕಟ” ವನ್ನು ಕೊನೆಗೊಳಿಸಲು ಮತ್ತು ಪ್ಯಾಲೆಸ್ತೀನ್’ನ ಮೇಲೆ ಬಾಂಬ್ ದಾಳಿಯನ್ನು ಕೊನೆಗೊಳಿಸಲು “ಸಂಪೂರ್ಣ ಕದನ ವಿರಾಮ”ಕ್ಕೆ ಆಗ್ರಹಿಸಿದ್ದಾರೆ.

” ಕದನ ವಿರಾಮದ ಕಾರಣ ಅವರು ಗಾಜಾದ ಮಹಿಳೆಯರು ಮತ್ತು ಮಕ್ಕಳಿಗೆ ಸ್ವಲ್ಪ ಸಮಾಧಾನವಾಗಿದೆ. ಆದರೆ ಇಸ್ರೇಲಿ ಬಾಂಬ್ ದಾಳಿ ಶೀಘ್ರದಲ್ಲೇ ಮತ್ತೆ ಪ್ರಾರಂಭವಾಗುತ್ತದೆ” ಎಂದು ನೋವು ವ್ಯಕ್ತಪಡಿಸಿದ್ದಾರೆ.

“ನಾಳೆ, ಗಾಜಾದಲ್ಲಿನ ಮಕ್ಕು ಆಹಾರ ಮತ್ತು ನೀರಿಗಾಗಿ ಹತಾಶರಾಗಿದ್ದಾರೆ. ಅವರ ಮನೆಗಳು, ಬೀದಿಗಳು ಮತ್ತು ಶಾಲೆಗಳು ಶೀಘ್ರದಲ್ಲೇ ಮತ್ತೆ ಬೆಂಕಿಗೆ ಒಳಗಾಗುತ್ತದೆ ಎಂದು ಭಯವಾಗುತ್ತಿದೆ” ಎಂದು ಮಲಾಲ ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

“ನಾವು ಅವರಿಗಾಗಿ ಮಾತನಾಡುತ್ತಲೇ ಇರಬೇಕು. ಪೂರ್ಣ ಕದನ ವಿರಾಮ ಮತ್ತು ಹೆಚ್ಚು ಮಾನವೀಯ ಸಹಾಯಕ್ಕಾಗಿ ಆಗ್ರಹಿಸಬೇಕು. ಅನಾವಶ್ಯಕವಾದ ಸಂಕಟ ಕೊನೆಗಾಣಬೇಕು” ಎಂದು ಹೇಳಿದ್ದಾರೆ.

Latest Indian news

Popular Stories