ಜಾಮೀನಿನ ಮೇಲೆ ಹೊರಗಿರುವ ನೂಹ್ ಹಿಂಸಾಚಾರದ ಆರೋಪಿ ಬಿಟ್ಟು ಬಜರಂಗಿಯಿಂದ ವ್ಯಕ್ತಿಯೊಬ್ಬನ ಥಳಿತ – ಮೂಕವೀಕ್ಷಕನಾಗಿ ನೋಡುತ್ತಿದ್ದ ಪೊಲೀಸ್ ಸಿಬ್ಬಂದಿ!

ನವ ದೆಹಲಿ: ಕಳೆದ ವರ್ಷ ಹರಿಯಾಣದ ನುಹ್‌ನಲ್ಲಿ ನಡೆದ ಹಿಂಸಾಚಾರದ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಹೊರಗಿರುವ ಬಿಟ್ಟು ಬಜರಂಗಿ, ಆತನ ಗೋರಕ್ಷಕ ಗುಂಪಿನ ಇತರರು ವ್ಯಕ್ತಿಯೊಬ್ಬನಿಗೆ ದೊಣ್ಣೆಯಿಂದ ಥಳಿಸುತ್ತಿರುವ ವೀಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಒಬ್ಬ ಪೊಲೀಸ್ ಸಿಬ್ಬಂದಿ ಮೂಕ ವೀಕ್ಷಕನಾಗಿ ನೋಡುತ್ತಿರುವ ದೃಶ್ಯವೂ ಕಂಡು ಬಂದಿದೆ. ಕೆಲವು ವ್ಯಕ್ತಿಗಳು ಕೈ ಕಾಲು ಹಿಡಿದಿದ್ದು ಬಿಟ್ಟು ಬಜರಂಗಿ ದೊಣ್ಣೆಯಲ್ಲಿ ಹೊಡೆಯುವ ವೀಡಿಯೋ ಇದಾಗಿದೆ‌

ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ. 

ಏಪ್ರಿಲ್ 1ರ ವಿಡಿಯೋ ಇದಾಗಿದ್ದು, ಹಲ್ಲೆಗೊಳಗಾದ ವ್ಯಕ್ತಿ ಫರಿದಾಬಾದ್‌ನ ಸರೂರ್‌ಪುರ ನಿವಾಸಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಶಾಮು ಎಂಬ ವ್ಯಕ್ತಿ ತನ್ನ ನೆರೆಹೊರೆಯ ಇಬ್ಬರು ಹುಡುಗಿಯರನ್ನು ಚಾಕೊಲೇಟ್‌ ನೀಡಿ ತನ್ನ ಮನೆಗೆ ಕರೆದೊಯ್ದಿದ್ದಾನೆ ಎಂದು ಆರೋಪಿಸಲಾಗಿದೆ. ಸ್ಥಳೀಯ ನಿವಾಸಿಗಳ ಪ್ರಕಾರ ಆತ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದ ಎಂದು ದೂರಿದ್ದಾರೆ.

ನಂತರ ಅವನ ಮನೆಗೆ ‌ಹೋಗಿ ಶಾಮುವನ್ನು ಎಳೆದು ತಂದು ಕೃತ್ಯ ಎಸಗಲಾಗಿದೆ ಎಂದು ವರದಿಯಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Latest Indian news

Popular Stories