ಹೀಟ್ ವೇವ್: 1300ಕ್ಕೂ ಅಧಿಕ ಹಜ್ಜ್ ಯಾತ್ರಾರ್ಥಿಗಳು ಮೃತ್ಯು – ಸೌದಿ

ಸೌದಿ ಅರೇಬಿಯಾ:ತೀವ್ರವಾದ ತಾಪಮಾನದ ಕಾರಣ ಹಜ್ 1,300 ಕ್ಕೂ ಹೆಚ್ಚು ಹಜ್ಜ್ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೆಚ್ಚಿನವರು ಅಧಿಕೃತ ಪರವಾನಗಿಗಳನ್ನು ಹೊಂದಿರಲಿಲ್ಲ ಎಂದು ಸೌದಿ ಅರೇಬಿಯಾ ಭಾನುವಾರ ಹೇಳಿದೆ.

“ದುರದೃಷ್ಟಕರವಾಗಿ, ಮರಣದ ಸಂಖ್ಯೆ 1,301ಕ್ಕೆ ತಲುಪಿದೆ. 83 ಪ್ರತಿಶತದಷ್ಟು ಜನರು ಹಜ್ ಮಾಡಲು ಅನಧಿಕೃತವಾಗಿ ಬಂದಿದ್ದರು. ಸಾಕಷ್ಟು ಆಶ್ರಯ ಅಥವಾ ಸೌಕರ್ಯವಿಲ್ಲದೆ ನೇರ ಸೂರ್ಯನ ಬೆಳಕಿನಲ್ಲಿ ದೂರದವರೆಗೆ ನಡೆದಿದ್ದಾರೆ” ಎಂದು ಅಧಿಕೃತ ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.

ರಾಜತಾಂತ್ರಿಕ ಲೆಕ್ಕಚಾರದ ಪ್ರಕಾರ ಇದುವರೆಗೆ ಸಾವಿನ ಸಂಖ್ಯೆ 1100 ರ ಗಡಿ ದಾಟಿದೆ.

Latest Indian news

Popular Stories