ಒವೈಸಿ ಸಂಬಂಧಿ ಹೈದರಾಬಾದ್‌ನ ಖ್ಯಾತ ಮೂಳೆ ಶಸ್ತ್ರಚಿಕಿತ್ಸಕ ಡಾ ಮಜರುದ್ದೀನ್ ಅಲಿ ಖಾನ್ ಗುಂಡು ಹಾರಿಸಿ ಆತ್ಮಹತ್ಯೆ

ಹೈದರಾಬಾದ್: ಹೈದರಾಬಾದ್‌ನ ಖ್ಯಾತ ಮೂಳೆ ಶಸ್ತ್ರಚಿಕಿತ್ಸಕ ಡಾ ಮಜರುದ್ದೀನ್ ಅಲಿ ಖಾನ್ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

60 ವರ್ಷದ ಖಾನ್ ಅವರು ತಮ್ಮ ಬಂಜಾರಾ ಹಿಲ್ಸ್ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಗುಂಡು ಹಾರಿಸಿಕೊಂಡಿದ್ದ ಅವರನ್ನು ಕೂಡಲೇ ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಮಜರುದ್ದೀನ್ ಅಲಿ ಖಾನ್ ಅವರು ಒವೈಸಿ ಆಸ್ಪತ್ರೆಯ ಅಧೀಕ್ಷಕರಾಗಿದ್ದರು. ಇನ್ನು ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎರಡನೇ ಮಗಳ ಮಾವನಾಗಿದ್ದಾರೆ. ಮಜರುದ್ದೀನ್ ಅಲಿ ಖಾನ್ ತಲೆಯ ಬಲಭಾಗದಲ್ಲಿ ಗುಂಡಿನ ಗಾಯವಾಗಿತ್ತು. ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಡೆಪ್ಯುಟಿ ಕಮಿಷನರ್ ಆಫ್ ಪೋಲಿಸ್ ಜೋಯಲ್ ಡೇವಿಸ್ ಅವರು, ಖಾನ್ ಅವರು ಆಸ್ತಿ ಮತ್ತು ಕೌಟುಂಬಿಕ ವಿವಾದಗಳ ಕಾರಣದಿಂದ ಗುಂಡು ಹಾರಿಸಿಕೊಂಡಿದ್ದಾರೆ. ವೈದ್ಯರು ಬಂದೂಕು ಪರವಾನಗಿ ಹೊಂದಿದ್ದು, ಆತ್ಮಹತ್ಯೆಗೆ ಪರವಾನಗಿ ಪಡೆದ ಗನ್ ಬಳಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆಸ್ಪತ್ರೆಗೆ ಕರೆತರುವ ನಾಲ್ಕು ಗಂಟೆಗಳ ಮೊದಲು ಖಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮನೆಯಲ್ಲಿ ಒಬ್ಬರೇ ಇದ್ದು ಫೋನ್ ಮಾಡಿದರೂ ಸ್ಪಂದಿಸದಿದ್ದಾಗ ಕೆಲವು ಸಂಬಂಧಿಕರು ಅವರನ್ನು ನೋಡಲು ತೆರಳಿದ್ದರು. ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಖಾನ್ ಓವೈಸಿ ಆಸ್ಪತ್ರೆಯ ಪ್ರಾರಂಭದಿಂದಲೂ ಅದರೊಂದಿಗೆ ಸಂಬಂಧ ಹೊಂದಿದ್ದರು. ಅವರ ಮಗ ಡಾ. ಅಬಿದ್ ಅಲಿ ಖಾನ್ 2020ರಲ್ಲಿ ಅಸಾದುದ್ದೀನ್ ಓವೈಸಿಯ ಎರಡನೇ ಮಗಳನ್ನು ವಿವಾಹವಾಗಿದ್ದರು.

Latest Indian news

Popular Stories