ಐದು ಹೆಣ್ಣು ಮಗುವಿನ ತಂದೆ ಪನ್ನಾಲಾಲ್ “ಗಂಡು‌ ಮಗು” ಧೃಡೀಕರಣಕ್ಕೆ ಪತ್ನಿ ಅನಿತಾಳ ಹೊಟ್ಟೆ ಸೀಳಿದ ಪ್ರಕರಣ -ಆರೋಪಿಗೆ ಜೀವಾವಧಿ ಶಿಕ್ಷೆ!

ಉತ್ತರ ಪ್ರದೇಶದ ಬದೌನ್‌ನಲ್ಲಿ ಒಬ್ಬ ವ್ಯಕ್ತಿ ತನ್ನ ಗರ್ಭಿಣಿ ಹೆಂಡತಿಗೆ ಗಂಡು ಅಥವಾ ಹೆಣ್ಣು ಮಗುವಿಗೆ ಜನ್ಮ ನೀಡಲಿದ್ದಾಳೆಯೇ ಎಂದು ಪರೀಕ್ಷಿಸಲು ಕುಡಗೋಲು ಬಳಸಿ ಹೊಟ್ಟೆಯನ್ನು ಕತ್ತರಿಸಿದ ಪ್ರಕರಣದಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಬದೌನ್‌ನ ಸಿವಿಲ್ ಲೈನ್ಸ್‌ನ ನಿವಾಸಿ ಪನ್ನಾ ಲಾಲ್ ಸೆಪ್ಟೆಂಬರ್ 2020 ರಲ್ಲಿ ತನ್ನ ಪತ್ನಿ ಅನಿತಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ.

ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿದ್ದು, ಐದು ಹೆಣ್ಣು ಮಕ್ಕಳಿದ್ದರು. ಆದರೆ, ಪನ್ನಾ ಲಾಲ್ ನಿಗೆ ಗಂಡು ಮಗು ಜನಿಸಬೇಕೆಂದು ಅವರು ಜಗಳವಾಡುತ್ತಿದ್ದರು.

ದಂಪತಿಗಳ ಜಗಳದ ಬಗ್ಗೆ ಅನಿತಾ ಅವರ ಕುಟುಂಬಕ್ಕೆ ತಿಳಿದಿತ್ತು. ಜಗಳವನ್ನು ನಿಲ್ಲಿಸಲು ಪನ್ನಾ ಲಾಲ್‌ಗೆ ಮನವೊಲಿಸಲು ಪ್ರಯತ್ನಿಸಿದರು ಆದರೆ ಅವರು ಅನಿತಾಗೆ ವಿಚ್ಛೇದನ ನೀಡಿ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗುವುದಾಗಿ ಬೆದರಿಕೆ ಹಾಕಿದ್ದ.

ಘಟನೆ ನಡೆದ ದಿನದಂದು ದಂಪತಿಗಳು ಗರ್ಭದಲ್ಲಿರುವ ಮಗುವಿನ ಲಿಂಗದ ಬಗ್ಗೆ ಮತ್ತೆ ಜಗಳವಾಡಿದ್ದಾರೆ. ಇದರಿಂದ ಕುಪಿತಗೊಂಡ ಪನ್ನಾ ಲಾಲ್ ಅವರು ಅನಿತಾಗೆ ಗಂಡು ಅಥವಾ ಹೆಣ್ಣು ಮಗುವಿದೆಯೇ ಎಂದು ಪರೀಕ್ಷಿಸಲು ಅನಿತಾ ಅವರ ಹೊಟ್ಟೆಯನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದ. ಅನಿತಾ ಜಗಳವಾಡಿದಾಗ ಆಕೆಗೆ ಕೊಲೆ ಬೆದರಿಕೆ ಹಾಕಿದ್ದಾನೆ.

ಕುಡುಗೋಲಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ ಬಳಿಕ ಆಕೆ ಆತನಿಂದ ಓಡಿಹೋಗಲು ಯತ್ನಿಸಿದ್ದಾಳೆ. ಅವನು ಅವಳನ್ನು ಹಿಡಿದು ಕುಡುಗೋಲಿನಿಂದ ಅವಳ ಹೊಟ್ಟೆಯನ್ನು ಕತ್ತರಿಸಿ್ದ. ಆಕೆ ಎಂಟು ತಿಂಗಳ ಗರ್ಭಿಣಿಯಾಗಿದ್ದಳು. ಆಕೆಯ ಕರುಳು ಹೊಟ್ಟೆಯಿಂದ ಹೊರಬಂದು ನೇತಾಡುವಷ್ಟು ಆಳವಾಗಿ ಗಾಯವಾಗಿತ್ತು ಎಂದು ಅನಿತಾ ನ್ಯಾಯಾಲಯಕ್ಕೆ ತಿಳಿಸಿದರು.

ನೋವಿನಿಂದ ಕೂಗುತ್ತಿದ್ದನ್ನು ನೋಡಿ ಹತ್ತಿರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅವಳ ಸಹೋದರ ಅವಳ ಅವಳನ್ನು ರಕ್ಷಿಸಲು ಬಂದಿದ್ದ. ಆತನನ್ನು ಕಂಡ ಪನ್ನಾ ಲಾಲ್ ಸ್ಥಳದಿಂದ ಪರಾರಿಯಾಗಿದ್ದ.

ಅನಿತಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆಕೆ ದಾಳಿಯಿಂದ ಬದುಕುಳಿದಿದ್ದರೂ, ಆಕೆಯ ಗಂಡು ಮಗುವನ್ನು ಉಳಿಸಲಾಗಲಿಲ್ಲ.

Latest Indian news

Popular Stories