ಹರೀಶ್ ಪೂಂಜಾ ಬಂಧನ ನಿರ್ಧಾರದಿಂದ ಹಿಂದೆ ಸರಿದ ಪೊಲೀಸರು: ಕಾರ್ಯಕರ್ತರಿಂದ ಸಂಭ್ರಮಾಚರಣೆ

ಬೆಳ್ತಂಗಡಿ: ಠಾಣೆಗೆ ನುಗ್ಗಿ ಪೊಲೀಸರಿಗೆ ಅವಾಚ್ಯ ಪದ ಬಳಸಿ ನಿಂದನೆ, ಪೊಲೀಸರ ಕರ್ತವ್ಯ ಕ್ಕೆ ಅಡ್ಡಿ, ಅನುಮತಿ ರಹಿತ ಪ್ರತಿಭಟನೆ, ಪೊಲೀಸರಿಗೆ ಬೆದರಿಕೆ ಮೊದಲಾದ ಆರೋಪದಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಬಂಧನ‌ ಭೀತಿಯಲ್ಲಿದ್ದ ಶಾಸಕ ಹರೀಶ್ ಪೂಂಜಾರನ್ನು ಬಂಧಿಸುವ ನಿರ್ಧಾರದಿಂದ ಪೊಲೀಸರು ಹಿಂದೆ ಸರಿದಿದ್ದು, ಈ ಹಿನ್ನೆಲೆಯಲ್ಲಿ ಪುಂಜಾ ಮನೆ ಮುಂದೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ.


ಬೆಳ್ತಂಗಡಿಯ ಹರೀಶ್ ಪೂಂಜಾ ನಿವಾಸದ ಮುಂದೆ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಸೇರಿದ್ದು, ಬಂಧನದಿಂದ ಸರಕಾರಕ್ಕೂ ಹಿನ್ನಡೆಯಾಗುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆಂದು ಹೇಳಲಾಗುತ್ತಿದೆ.


ಹರೀಶ್ ಪೂಂಜಾ ಮನೆಗೆ ಬಂದಿದ್ದ ಪೊಲೀಸರ ವಿರುದ್ಧವೂ ಬಿಜೆಪಿ ಕಾರ್ಯಕರ್ತರು ಗೋಬ್ಯಾಕ್ ಘೋಷಣೆ ಕೂಗಿದ್ದು, ಸರಕಾರದ ವಿರುದ್ದವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂಂಜಾರನ್ನು ಬಂಧಿಸುವ ನಿರ್ಧಾರದಿಂದ ಪೊಲೀಸರು ಹಿಂದೆ ಸರಿದ ವಿಚಾರ ತಿಳಿಯುತ್ತಿದ್ದಂತೆ ಕಾರ್ಯಕರ್ತರು ಹರೀಶ್ ಪೂಂಜಾರನ್ನು ಎತ್ತಿ ಸಂಭ್ರಮಾಚರಿಸಿದರು.

Latest Indian news

Popular Stories