ಬಿಹಾರದಲ್ಲಿ ರಾಜಕೀಯ ಕ್ಷಿಪ್ರ ಬೆಳವಣಿಗೆ: ಇಂಡಿಯಾ ಬ್ಲಾಕ್’ನಿಂದ ಚಿರಾಗ್ ಪಸ್ವಾನ್’ಗೆ ಬಿಗ್ ಆಫರ್

ಬಿಹಾರದ ವಿಷಯದಲ್ಲಿ ಎನ್‌ಡಿಎಯಲ್ಲಿ ಸೀಟು ಹಂಚಿಕೆಯ ಜಗಳ ಮುಂದುವರಿದಂತೆ ಇಂಡಿಯಾ ಮೈತ್ರಿಕೂಟವು ರಾಜಕೀಯ ಚದುರಂಗದಾಟಕ್ಕೆ ಮುಂದಾಗಿದೆ. ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್‌ಗೆ ರಾಜ್ಯದಲ್ಲಿ ಎಂಟು ಮತ್ತು ಉತ್ತರ ಪ್ರದೇಶದಲ್ಲಿ ಎರಡು ಲೋಕಸಭಾ ಸ್ಥಾನಗಳನ್ನು ನೀಡುವ ಆಫರ್ ನೀಡಿದೆ.

ಎನ್‌ಡಿಎಯಿಂದ ಬಿಹಾರದಲ್ಲಿ ಆರು ಲೋಕಸಭಾ ಕ್ಷೇತ್ರಗಳನ್ನು ಮಾತ್ರ ನೀಡಲಾಗುತ್ತಿದೆ ಎಂದು ವರದಿಯಾಗಿದ್ದು ಇದೀಗ ಪಾಸ್ವಾನ್‌ಗೆ ನೀಡಿರುವ ಈ ಹೊಸ ಪ್ರಸ್ತಾಪವು ಹಲವು ತಿರುವುಗಳಿಗೆ ಕಾರಣವಾಗಬಹುದೆಂದು ಹೇಳಲಾಗಿದೆ.

ಆದರೆ ಈ ಸ್ಥಾನಗಳಲ್ಲಿ ಕೆಲವೊಂದಿಷ್ಟು ಪಶುಪತಿ ಪಾಸ್ವಾನ್ ಅವರೊಂದಿಗೆ ಹಂಚಿಕೊಳ್ಳಬೇಕೆಂಬ ಷರತ್ತು ವಿಧಿಸುವ ಸಾಧ್ಯತೆ ಇದೆ. ಆದರೆ ಈಗಾಗಲೆ ಚಿರಾಗ್ ಪಸ್ವಾನ್ ಮತ್ತು ಪಶುಪತಿ ಪಾಸ್ವನ್ ನಡುವಿನ ಸಂಬಂಧ ಉತ್ತಮವಾಗಿಲ್ಲ ಎಂಬುವುದನ್ನು ಗಮನಿಸಬೇಕಾಗಿದೆ.

Latest Indian news

Popular Stories