ಚಂಡಿಗಢ್: ಮೇಯರ್ ಚುನಾವಣೆಯಲ್ಲಿ ಚುನಾವಣಾಧಿಕಾರಿ ನಡೆಸಿದ ಅಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಸರ್ವೋಚ್ಚ ನ್ಯಾಯಾಲಯ ಇದೀಗ ಅಸಿಂಧು ಮತಗಳನ್ನು ಸಿಂಧುವೆಂದು ಪರಿಗಣಿಸಲು ಆದೇಶಿಸಿದೆ.
ಚಂಡೀಗಢ ಮೇಯರ್ ಚುನಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿ ಅನಿಲ್ ಮಸಿಹ್ ವಿರುದ್ಧ ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಬಿಜೆಪಿ ಮತ್ತು ಎಎಪಿ ನಡುವಿನ ವಿವಾದದ ಎಂಟು “ಅಸಿಂಧು” ಮತಗಳನ್ನು ಪರಿಶೀಲಿಸಿತು. “ಮರು ಎಣಿಕೆ ಮಾಡಲಾಗುವುದು… ಮಾನ್ಯವೆಂದು ಪರಿಗಣಿಸಲಾಗುವುದು” ಮತ್ತು “ಫಲಿತಾಂಶಗಳ ಆಧಾರದ ಮೇಲೆ ಪ್ರಕಟಿಸಲಾಗುವುದು” ಎಂದು ಸುಪ್ರೀಂ ಹೇಳಿದೆ.
ಈ ಸಿಂಧುತ್ವದೊಂದಿಗೆ ಆಪ್ ಮತ್ತು ಕಾಂಗ್ರೆಸ್ ಮೈತ್ರಿಗೆ ಸ್ಪಷ್ಟ ಜಯ ಸಿಗಲಿದೆ. ಈ ಮೂಲಕ ಬಿಜೆಪಿ ಭಾರೀ ಮಖಭಂಗದೊಂದಿಗೆ ಪ್ರಜಾಪ್ರಭುತ್ವ ಅತೀ ದೊಡ್ಡ ಅಕ್ರಮಕ್ಕೆ ಚುನಾವಣಾಧಿಕಾರಿ ಕಾರಣವಾಗಿದ್ದಾರೆ.