ಮತ ಚಲಾಯಿಸಿ ಮೊದಲ ಬಾರಿಗೆ ಮಾಧ್ಯಮದ ಮುಂದೆ ಬಂದ ಪ್ರಧಾನಿ ಮೋದಿ | ಹೇಳಿದ್ದೇನು?

ಅಹಮದಾಬಾದ್​ ಮೇ 07: ಲೋಕಸಭೆ ಚುನಾವಣೆಗೆ (Lok Sabha Election) ದೇಶದಲ್ಲಿ ಮೂರನೇ ಹಂತದ ಮತ್ತು ರಾಜ್ಯದಲ್ಲಿ ಎರಡನೇ ಹಂತದ ಮಾತದಾನ ಪ್ರಕ್ರಿಯೆ ಆರಂಭವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಅಹಮದಾಬಾದ್​ನ (Ahmedabad) ನಿಶಾನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮತದಾನ ಮಾಡಿದರು. ಪ್ರಧಾನಿ ಮೋದಿಯವರು ಬರುತ್ತಿದ್ದಂತೆ ಮತಗಟ್ಟೆ ಬಳಿ ನೆರದಿದ್ದ ಜನರು ಮೋದಿ ಮೋದಿ ಅಂತ ಕೂಗಲು ಆರಂಭಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಮತದಾನ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕ ಸ್ಥಳದಲ್ಲಿ ನಿಂತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ವಿಶೇಷವಾಗಿದೆ.

ಮತದಾನದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ 3ನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಮತದಾನ ಅನ್ನೋದು ಸಾಮಾನ್ಯ ದಾನ ಅಲ್ಲ, ಶ್ರೇಷ್ಠ ದಾನಗಳಲ್ಲಿ ಒಂದು. ಎಲ್ಲರೂ ಮತದಾನದ ಪ್ರಕ್ರಿಯೆಯಲ್ಲಿ ಭಾಗಿಯಾಗಿ. ಎಲ್ಲರೂ ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ಹೇಳಿದರು.

Latest Indian news

Popular Stories