ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಮುಳುಗುತ್ತಿದ್ದ ಇಬ್ಬರು ಕಾರ್ಮಿಕರ ರಕ್ಷಣೆ

ಕಾರವಾರ :ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಮುಳುಗುತ್ತಿದ್ದ ಇಬ್ಬರು ಕಾರ್ಮಿಕರನ್ನು ಲೈಫ್ ಗಾರ್ಡಗಳು ರಕ್ಷಣೆ ಮಾಡಿದ ಘಟನೆ ಮಧ್ಯಾಹ್ನ ನಡೆದಿದೆ.

ಸೀಬರ್ಡ ಕಾರ್ಮಿಕರಾದ ಸುಧೀರ್ ಕುಮಾರ್ ಮತ್ತು ಸಿಕಂದರ್ ಸಮುದ್ರದಲ್ಲಿ ಈಜಲು ತೆರಳಿದ್ದರು. ನಶೆಯಲ್ಲಿದ್ದ‌ ಕಾರಣ ಇವರು ಸಮುದ್ರದಲ್ಲಿ ಮುಳುಗತೊಡಗಿದರು. ಇದನ್ನು ಗಮನಿಸಿದ‌ ಬೀಚ್ ಲೈಫ್ ಗಾರ್ಡಗಳು ಇಬ್ಬರನ್ನು ರಕ್ಷಿಸಿದರು. ಸಮುದ್ರದಲ್ಲಿ ಅವರನ್ನು ಮುಳುಗದಂತೆ ತಡೆದು ದಂಡೆಗೆ ಎಳೆದು ತಂದು ಪ್ರಥಮ‌ ಚಿಕಿತ್ಸೆ ನೀಡಿದರು.‌ ಉತ್ತರ ಪ್ರದೇಶ ಮೂಲದ ಇಬ್ಬರು ಕಾರ್ಮಿಕರ ಜೀವ ರಕ್ಷಣೆ ಯಾಗಿದೆ. ಲೈಫ್ ಗಾರ್ಡಗಳ ಸಾಹಸ ಮತ್ತು ‌ಸಮಯ ಪ್ರಜ್ಞೆಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ‌.

Latest Indian news

Popular Stories