ರಾಹುಲ್ ಗಾಂಧಿ ಅಣು ಬಾಂಬ್ ಗೆ ಹೆದರಬಹುದು, ಆದರೆ ಬಿಜೆಪಿ ಹೆದರುವುದಿಲ್ಲ: ಅಮಿತ್ ಶಾ

ಕೌಶಂಬಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅಣು ಬಾಂಬ್ ಗೆ ರಾಹುಲ್ ಗಾಂಧಿ ಹೆದರಬಹುದೇನೋ ಆದರೆ ಬಿಜೆಪಿ ಹೆದರುವುದಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆಯೂ ಮಾತನಾಡಿರುವ ಗೃಹ ಸಚಿವ ಅಮಿತ್ ಶಾ, ಪಾಕ್ ಆಕ್ರಮಿತ ಕಾಶ್ಮೀರ ಭಾರತದ್ದಾಗಿದ್ದು, ಅದನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಪರಮಾಣು ಬಾಂಬ್ ಇದೆ ಎಂಬ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿಕೆಯನ್ನು ಅಮಿತ್ ಶಾ ಉಲ್ಲೇಖಿಸಿದ್ದಾರೆ. ಕೌಶಂಬಿ (ಎಸ್‌ಸಿ) ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ ಪ್ರತಾಪ್‌ಗಢದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, “ರಾಹುಲ್ ಬಾಬಾ, ನೀವು ಅಣುಬಾಂಬ್‌ಗೆ ಹೆದರಬೇಕಾದರೆ ಹೆದರಿ, ನಾವು ಹೆದರುವುದಿಲ್ಲ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದೆ ಮತ್ತು ನಾವು ಅದನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ವೈರಲ್ ಆಗಿರುವ ವೀಡಿಯೊದಲ್ಲಿ ಮಾತನಾಡಿರುವ ಅಯ್ಯರ್, ಪಾಕಿಸ್ತಾನವು ಸಾರ್ವಭೌಮ ರಾಷ್ಟ್ರವಾಗಿರುವುದರಿಂದ ಭಾರತಕ್ಕೆ ಗೌರವವನ್ನು ನೀಡಬೇಕು ಮತ್ತು ಅದರೊಂದಿಗೆ ಅಣುಬಾಂಬ್ ಹೊಂದಿರುವುದರಿಂದ ಅದರೊಂದಿಗೆ ಮಾತುಕತೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

‘ಹುಚ್ಚು’ ವ್ಯಕ್ತಿಯೊಬ್ಬರು ಅಧಿಕಾರಕ್ಕೆ ಬಂದು ಅಣುಬಾಂಬ್ ಪ್ರಯೋಗಿಸಿದರೆ ಅದು ಒಳ್ಳೆಯದಲ್ಲ, ಅದರ ಪರಿಣಾಮ ಇಲ್ಲೂ ಆಗುತ್ತದೆ ಎಂದು ವಿಡಿಯೋದಲ್ಲಿ ಸೂಚಿಸಿದ್ದಾರೆ. ಈ ಹೇಳಿಕೆಗಳು ಗದ್ದಲ ಎಬ್ಬಿಸುತ್ತಿದ್ದಂತೆ, ಕೆಲವು ತಿಂಗಳ ಹಿಂದೆ ಅಯ್ಯರ್ ಮಾಡಿದ ಟೀಕೆಗಳನ್ನು ಕಾಂಗ್ರೆಸ್ ಸಂಪೂರ್ಣವಾಗಿ ಒಪ್ಪುವುದಿಲ್ಲ ಎಂದು ಹೇಳಿದೆ.

Latest Indian news

Popular Stories