ಮೋದಿ ಪರ ಘೋಷಣೆ ಕೂಗಿದವರ ಶೇಕ್ ಹ್ಯಾಂಡ್ ಮಾಡಿದ ರಾಹುಲ್ ಗಾಂಧಿ – ದ್ವೇಷದ ಭಾಷೆಗೆ ಪ್ರೀತಿಯ ಉತ್ತರ

ಛತ್ತೀಸ್ ಗಢ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೂಗುತ್ತಿದ್ದ ಜನಸಮೂಹದತ್ತ ನಡೆದು ಅವರಿಗೆ ಶೇಕ್ ಹ್ಯಾಂಡ್ ಮಾಡಿದ್ದಾರೆ. ಪ್ರೀತಿಯಲ್ಲಿ ದೊಡ್ಡ ಶಕ್ತಿ ಇದೆ ಎಂದು ಪ್ರತಿಪಕ್ಷ ಹೇಳಿದೆ. ಕಳೆದ ವಾರ ಒಡಿಶಾದ ಕೊರ್ಬಾದಿಂದ ಧೋಡಿಪಾರಾ ಮೂಲಕ ಕಟ್ಘೋರಾ ಮಾರ್ಗದಲ್ಲಿ ಛತ್ತೀಸ್ ಗಢವನ್ನು ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಪ್ರವೇಶಿಸಿದೆ.

ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, “ಪ್ರೀತಿಯಲ್ಲಿ ದೊಡ್ಡ ಶಕ್ತಿ ಇದೆ. ಬಿಜೆಪಿ ಕಾರ್ಯಕರ್ತರು ಭಾರತ್ ಜೋಡೋ ನ್ಯಾಯ ಯಾತ್ರೆ ವಿರುದ್ಧ ಪ್ರತಿಭಟನೆಗೆ ನಿಂತಿದ್ದರು. ಆದರೆ ಯಾತ್ರೆ ಅಲ್ಲಿಗೆ ಸಾಗಿದಾಗ, ರಾಹುಲ್ ಗಾಂಧಿ ಅವರನ್ನು ಭೇಟಿಯಾದಾಗ ಈ ಸನ್ನಿವೇಶ ನಡೆಯಿತು ಎಂದು ಹೇಳಿದೆ.

ವೀಡಿಯೊದಲ್ಲಿ, ಕೇಸರಿ ಸ್ಕಾರ್ಫ್‌ ಮತ್ತು ಭಗವಾನ್ ಹನುಮಾನ್ ಚಿತ್ರವಿರುವ ಧ್ವಜಗಳನ್ನು ಹಿಡಿದುಕೊಂಡು ‘ಜೈ ಶ್ರೀ ರಾಮ್’ ಮತ್ತು ‘ಮೋದಿ ಮೋದಿ’ ಎಂದು ಘೋಷಣೆಗಳನ್ನು ಕೂಗುವ ಗುಂಪು ಸೇರಿದಂತೆ ದೊಡ್ಡ ಸಂಖ್ಯೆಯ ಜನರು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿರುವುದನ್ನು ಕಾಣಬಹುದು. ಅವರನ್ನು ನೋಡಿದ ಗಾಂಧಿ, ತಮ್ಮ ವಾಹನದಿಂದ ಇಳಿದು ಅವರ ಬಳಿಗೆ ತೆರಳಿ ಗೆ ಹಸ್ತಲಾಘವ ಮಾಡಿದರು. ನಂತರ ಅವರು ತಮ್ಮ ವಾಹನಕ್ಕೆ ಹಿಂತಿರುಗಿ ಗುಂಪಿಗೆ ಪ್ಲೇಯಿಂಗ್ ಕಿಸ್ ನೀಡಿದ್ದಾರೆ.

ಇದಕ್ಕೂ ಮುನ್ನ ಕೊರ್ಬಾದ ಸೀತಾಮಡಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, ಬಿಜೆಪಿ ಆಡಳಿತದಲ್ಲಿ ಜನರು ನಿರುದ್ಯೋಗ ಮತ್ತು ಹಣದುಬ್ಬರದಿಂದ ಕಂಗಾಲಾಗಿದ್ದಾರೆ ಎಂದು ಆರೋಪಿಸಿದರು.ಜನರು ಎಚ್ಚೆತ್ತುಕೊಳ್ಳುವಂತೆ ಕೇಳಿಕೊಂಡ ಕಾಂಗ್ರೆಸ್ ನಾಯಕ, ಆಡಳಿತ ವ್ಯವಸ್ಥೆಯಿಂದ ಜನಸಾಮಾನ್ಯರ ದರೋಡೆ ಮತ್ತು ದಾರಿ ತಪ್ಪಿಸಲಾಗುತ್ತಿದೆ ಎಂದು ಹೇಳಿದರು.

 

Latest Indian news

Popular Stories