ರಾಯಚೂರು:ಬೀದಿ ನಾಯಿಗಳ ದಾಳಿಗೆ ಒಳಗಾಗಿದ್ದ ಮಗು ಮೃತ್ಯು

ರಾಯಚೂರು: ಬೀದಿನಾಯಿಗಳ ದಾಳಿಗೆ ಒಳಗಾಗಿದ್ದ ರಾಯಚೂರು ತಾಲ್ಲೂಕಿನ ಕೊರ್ವಿಹಾಳ ಗ್ರಾಮದ 4 ವರ್ಷದ ಬಾಲಕಿ ಮೃತಪಟ್ಟ ಘಟನೆ ನಡೆದಿದೆ.

15 ದಿನಗಳ ಹಿಂದೆ ಕೊರ್ವಿಹಾಳ ಗ್ರಾಮದಲ್ಲಿ ಬಾಲಕಿ ಲಾವಣ್ಯ ಬೀದಿ ನಾಯಿ ದಾಳಿಗೆ ಒಳಗಾಗಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಳು ಆದರೆ ಶನಿವಾರ ಏಕಾಏಕಿ ಮೃತಪಟ್ಟಿದ್ದಾಳೆ.

ಮನೆಯ ಮುಂದೆ ಆಟವಾಡುತ್ತಿದ್ದ 7 ಮಕ್ಕಳ ಮೇಲೆ ಬೀದಿನಾಯಿ ದಾಳಿ ಮಾಡಿ ಗಾಯಗೊಳಿಸಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಎಲ್ಲಾ ಮಕ್ಕಳು ಬಿಡುಗಡೆಯಾಗಿದ್ದರು. ಲಾವಣ್ಯ ಸಾವಿನಿಂದ ನಾಯಿ ದಾಳಿಗೆ ಒಳಗಾದ ಉಳಿದ ಮಕ್ಕಳ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.

Latest Indian news

Popular Stories