ರಾಯಚೂರು | ಜಿಲ್ಲೆಯ ವಿವಿಧೆಡೆ ಮಳೆ; ರೈತರಲ್ಲಿ ಮಂದಹಾಸ

ರಾಯಚೂರು: ಬಿಸಿಲಿನಿಂದ ಬಸವಳಿದ ರಾಯಚೂರು ಜಿಲ್ಲೆಯ ಜನರಿಗೆ ಭಾನುವಾರ ಮಳೆರಾಯ ತಂಪೆರಗಿದ್ದಾನೆ.

ಜಿಲ್ಲೆಯ ವಿವಿಧೆಡೆ ಸೋಮವಾರ ಬೆಳಗಿನ ಜಾವ ಸಾಧಾರಣ ಮಳೆಯಾಗಿದೆ. ಗುಡುಗು ಮಿಂಚು‌ ಸಹಿತ ಬೆಳಗಿನ ಜಾವ 2 ಗಂಟೆಗೆ ಆರಂಭವಾದ ಮಳೆ ಬೆಳಿಗ್ಗೆ 6 ಗಂಟೆಯ ವರೆಗೂ ಸುರಿದಿದೆ. ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೃಷಿ ಚಟುವಟಿಕೆ ನಿರ್ವಹಿಸಲು ಅನುಕೂಲವಾಗಿದೆ. ಜಿಲ್ಲೆಯ ಮಾನ್ವಿ, ಸಿರವಾರ, ಕವಿತಾಳ, ತುರ್ವಿಹಾಳ, ಶಕ್ತಿನಗರ, ಸಿಂಧನೂರು, ಮುದಗಲ್‌ನಲ್ಲಿ ಮಳೆಯಾಗಿದೆ. ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇತ್ತು. ಮಳೆಯಿಂದಾಗಿ ನಗರದ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಹಲವೆಡೆ ಗಾಳಿಗೆ ಮರಗಳು ನೆಲಕ್ಕೆ ಉರುಳಿವೆ.

ರಾಯಚೂರಿನ ಎಪಿಎಂಸಿಯಲ್ಲಿ ಆವರಣದಲ್ಲಿ ಇಡಲಾಗಿದ್ದ ಭತ್ತದ ಕೆಲ ಚೀಲಗಳು ತೊಯ್ದಿವೆ. ಮಳೆಯ ಅಬ್ಬರಕ್ಕೆ ನೀರು ನುಗ್ಗಿ ಭತ್ತ ಹಾಳಾಗಿದೆ. ಮಧ್ಯಾಹ್ನ ನೆಲದ ಮೇಲೆ ಭತ್ತ ಸುರಿದ ಒಣ ಹಾಕಲಾಯಿತು.

ಬೆಳಿಗಿನ ಜಾವ ಮಳೆ ಶುರುವಾಗುತ್ತಿದ್ದಂತೆಯೇ ಭತ್ತ ತುಂಬಿದ್ದ ಲಾರಿಗಳನ್ನು ಎಪಿಎಂಸಿ ಆವರಣದಲ್ಲಿನ ಶೆಡ್‌ ಒಳಗಡೆ ನಿಲುಗಡೆ ಮಾಡಲಾಯಿತು.

IMG 20240513 WA0039 Featured Story, Raichur IMG 20240513 WA0038 Featured Story, Raichur IMG 20240513 WA0037 Featured Story, Raichur

Latest Indian news

Popular Stories