ರಾಜ್ಯದ ಈ ಜಿಲ್ಲೆಗಳಲ್ಲಿ ಮಾರ್ಚ್ 31 ರಿಂದ ಎರಡು ದಿನ ಮಳೆ ಸಾಧ್ಯತೆ; ಕೊಡಗು, ಚಿ.ಮಗಳೂರಿನಲ್ಲಿ ತಂಪೆರೆದ ಮಳೆ

ಹವಾಮಾನ ತಜ್ಞರು ನೀಡಿರುವ ಮಾಹಿತಿ ಪ್ರಕಾರ ಶಿವಮೊಗ್ಗ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿ ಹಲವು ಜಿಲ್ಲೆಗಳಲ್ಲಿ ಮಾರ್ಚ್​ 31ರಿಂದ 2 ದಿನ ಕಾಲ ಮಳೆಯಾಗಲಿದೆ ಅಂತಾ ಹವಾಮಾನ ತಜ್ಞರಿಂದಲೇ ಮುನ್ಸೂಚನೆ ಸಿಕ್ಕಿದೆ.

ಇದಕ್ಕೆ ಪೂರಕವಾಗಿ ಈಗಾಗ್ಲೇ, ಕಾವೇರಿ ನದಿ ತವರು ಕೊಡಗು ಸೇರಿದಂತೆ ಚಿಕ್ಕಮಗಳೂರು, ಹುಬ್ಬಳ್ಳಿ & ಧಾರವಾಡ, ಗಡಿನಾಡು ಬೆಳಗಾವಿಯಲ್ಲೂ ಭಾರಿ ಮಳೆ ಬಿದ್ದಿದೆ. ಇನ್ನು ಕೆಲವೇ ಕೆಲ ದಿನದಲ್ಲಿ ಈ ಜಿಲ್ಲೆಗಳಲ್ಲಿ ಮತ್ತೆ ಮಳೆ ಆರ್ಭಟ ಶುರುವಾಗುವ ನಿರೀಕ್ಷೆ ಇದೆ.

ಈಗಾಗಲೇ ಕೊಡಗು, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳ ಜನರಿಗೆ ಮಳೆ ಬಿದ್ದು ರಿಲೀಫ್ ಸಿಕ್ಕಂತಾಗಿದೆ.ದಕ್ಷಿಣ ಕನ್ನಡದ ಕೆಲವೆಡೆ ಮಳೆಯಾಗಿದೆ.

Latest Indian news

Popular Stories