“ಫ್ಯಾಸಿಸ್ಟ್‌ ಬಿಜೆಪಿ ಡೌನ್‌ ಡೌನ್‌” ಎಂದು ಘೋಷಣೆ ಕೂಗುವುದು ಅಪರಾಧವಲ್ಲ – ಮದ್ರಾಸ್‌ ಹೈಕೋರ್ಟ್

“ಫ್ಯಾಸಿಸ್ಟ್‌ ಬಿಜೆಪಿ ಡೌನ್‌ ಡೌನ್‌” ಎಂದು ಘೋಷಣೆ ಕೂಗುವುದು ಅಪರಾಧವಲ್ಲವೆಂದು ಮದ್ರಾಸ್‌ ಹೈಕೋರ್ಟ್‌ ತಿಳಿಸಿದೆ. ತಮಿಳುನಾಡು ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಈಗಿನ ತೆಲಂಗಾಣ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಎದುರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಬಂಧನಕ್ಕೊಳಗಾದ ಲೋಯಿಸ್ ಸೋಫಿಯಾ ವಿರುದ್ಧ ದಾಖಲಿಸಲಾದ ಎಫ್‌ಐಆರ್ ಅನ್ನು ರದ್ದುಗೊಳಿಸುವ ಸಂದರ್ಭದಲ್ಲಿ ಮದ್ರಸ್‌ ಹೈಕೋರ್ಟ್‌ ಈ ಆದೇಶ ಹೊರಡಿಸಿದೆ.

ಮಧುರೈ ಪೀಠದ ನ್ಯಾಯಮೂರ್ತಿ ಪಿ ಧನಬಾಲ್ ಅವರು ಸೋಫಿಯಾ ಅವರು “ಫ್ಯಾಸಿಸ್ಟ್ ಬಿಜೆಪಿ” ಎಂಬ ಘೋಷಣೆಯನ್ನು ಮಾತ್ರ ಕೂಗಿದ್ದಾರೆ. ಅದೊಂದು ಕ್ಷುಲ್ಲಕ ಘೋಷಣೆಯಾಗಿದ್ದು ಅಪರಾಧವಲ್ಲ ಎಂದು ಹೇಳಿದ್ದಾರೆ.

ಐಪಿಸಿಯ ಸೆಕ್ಷನ್ 290 ರ ಅಡಿಯಲ್ಲಿ ಸಾರ್ವಜನಿಕ ಕಿರುಕುಳದ ಆರೋಪ ಹೊರಿಸಲು ಆರೋಪಪಟ್ಟಿಯಲ್ಲಿ ಏನೂ ಇಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಎಫ್‌ಐಆರ್ ದಾಖಲಾದ ತೂತುಕುಡಿ ಜಿಲ್ಲೆಯನ್ನು ತಮಿಳುನಾಡು ನಗರ ಪೊಲೀಸ್ ಕಾಯಿದೆಯಡಿ ಪಟ್ಟಿ ಮಾಡಲಾಗಿಲ್ಲ ಮತ್ತು ಆದ್ದರಿಂದ ಕಾಯಿದೆಯ ಸೆಕ್ಷನ್ 75 ಅನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಇದೀಗ ನ್ಯಾಯಾಲಯ ಪ್ರಕರಣ ರದ್ದತಿ ಕೋರಿ ಸೋಫಿಯಾ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿ ಪ್ರಕರಣ ರದ್ದುಗೊಳಿಸಿದೆ.

Latest Indian news

Popular Stories