ನಗೌರ್: ಮದ್ಯವ್ಯಸನಿ ಪತಿಯೊಬ್ಬ ತನ್ನ ಪತ್ನಿಯನ್ನು ಮೋಟಾರ್ ಬೈಕ್ ಗೆ ಕಟ್ಟಿಹಾಕಿ ಅವರ ಉರೆಲೆಲ್ಲಾ ಎಳೆದಾಡಿರುವ ಎಂದು ಘಟನೆ ರಾಜಸ್ಥಾನದ ನಗೌರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮಹಿಳೆಯನ್ನು ಮೋಟಾರ್ ಬೈಕ್ ಗೆ ಕಟ್ಟಿ ಅದರ ಹಿಂದೆ ಎಳೆದುಕೊಂಡು ಹೋಗುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಆಕೆಯ ಪತಿಯನ್ನು ಬಂಧಿಸಲಾಗಿದೆ.
ನಹರಸಿಂಗ್‌ಪುರ ಗ್ರಾಮದಲ್ಲಿ ಸುಮಾರು ಒಂದು ತಿಂಗಳ ಹಿಂದೆ ಈ ಘಟನೆ ನಡೆದಿದೆ. ಪ್ರೇಮರಾಮ್ ಮೇಘವಾಲ್ (32) ತನ್ನ ಪತ್ನಿಯನ್ನು ತನ್ನ ಮೋಟಾರ್‌ಸೈಕಲ್‌ಗೆ ಕಟ್ಟಿ ಅದರ ಹಿಂದೆ ಎಳೆದೊಯ್ಯುವ ಮೊದಲು ಥಳಿಸಿದ್ದಾನೆ. ಘಟನೆಯ ವಿಡಿಯೋ ಸೋಮವಾರ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ನಂತರ ಪೊಲೀಸರು ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮಹಿಳೆ ಪ್ರಸ್ತುತ ತನ್ನ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಾರೆ. ಆಕೆ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿರಲಿಲ್ಲ. ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಆರೋಪಿಯನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇಘವಾಲ್ ಮದ್ಯವ್ಯಸನಿಯಾಗಿದ್ದು, ಪತ್ನಿಗೆ ನಿತ್ಯ ಥಳಿಸುತ್ತಿದ್ದ ಎಂದು ಆತನ ನೆರೆಹೊರೆಯವರು ಹೇಳಿದ್ದಾರೆ.
ಗ್ರಾಮದ ಯಾರೊಂದಿಗೂ ಆಕೆಗೆ ಮಾತನಾಡಲು ಬಿಡುತ್ತಿರಲಿಲ್ಲ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪಂಚೌಡಿ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸುರೇಂದ್ರ ಕುಮಾರ್ ಹೇಳಿದ್ದಾರೆ.