ಮನೆ ಕೆಲಸದಾಕೆಗೆ ದೌರ್ಜನ್ಯ ಪ್ರಕರಣದಲ್ಲಿ ರೇವಣ್ಣಗೆ ಜಾಮೀನು ಮಂಜೂರು

ಬೆಂಗಳೂರು: ಮನೆಯ ಕೆಲಸದಾಕೆಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್​ಡಿ ರೇವಣ್ಣ ಜಾಮೀನು ಲಭಿಸಿದೆ. ಸೋಮವಾರ ಅವರಿಗೆ 42ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್​ ಮೆಜಿಸ್ಟ್ರೇಟ್​ ಕೋರ್ಟ್​ (ಎಸಿಎಂಎಂ) ಜಾಮೀನು ಮಂಜೂರು ಮಾಡಿದೆ.

47 ವರ್ಷದ ಮನೆಯ ಸಹಾಯಕಿಯ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಹೊಳೆನರಸೀಪುರ ಠಾಣೆಯಲ್ಲಿ ಸಂಸದ ಪ್ರಜ್ವಲ್ ಹಾಗೂ ಮತ್ತು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ಏಪ್ರಿಲ್​ 28 ರಂದು ಪ್ರಕರಣ ದಾಖಲಾಗಿತ್ತು.

ಐದು ಲಕ್ಷ ಬಾಂಡ್, ಒಬ್ಬ ಶ್ಯೂರಿಟಿ ಒದಗಿಸುವಂತೆ ಹೇಳಿ ನ್ಯಾ. ಜೆ ಪ್ರೀತ್ ಅವರಿದ್ದ ಪೀಠ ಷರತ್ತುಬದ್ಧ ಜಾಮೀನು ನೀಡಿದೆ. ಈ ಹಿಂದೆ ಶಿವರಾಜ್ ಎಂಬುವರ ಶ್ಯೂರಿಟಿ ಸಲ್ಲಿಸಲಾಗಿತ್ತು. ಇದನ್ನು ಪರಿಗಣಿಸಿದ ನ್ಯಾಯಪೀಠ ಸೆಕ್ಷನ್​ 354ಎ, 354ಡಿ, 506, 509 ಅಡಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ​​​ಹಾಗೆ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಸಬಹುದು ಎಂದು 42ನೇ ಎಸಿಎಂಎಂ ಕೋರ್ಟ್​ ನ್ಯಾಯಾಧೀಶೆ ಜೆ.ಪ್ರೀತ್ ಹೇಳಿದ್ದಾರೆ.

Latest Indian news

Popular Stories