ರಿಷಿ ಸುನಕ್ ಪಕ್ಷ ಹೀನಾಯವಾಗಿ ಯುಕೆ ಚುನಾವಣೆಯಲ್ಲಿ ಸೋಲಲಿದೆ – YouGov ಸಮೀಕ್ಷೆ

ಯುಕೆ ಪ್ರಧಾನಿ ರಿಷಿ ಸುನಕ್ ಈ ಬಾರಿಯ ಚುನಾವಣೆಯಲ್ಲಿ ಹೀನಾಯವಾಗಿ ಸೋಲುವ ಕುರಿತು ಸಮೀಕ್ಷೆ ಬೆಳಕು ಚೆಲ್ಲಿದೆ.

ಬುಧವಾರ 18,000 ಕ್ಕೂ ಹೆಚ್ಚು ಜನರನ್ನೊಳಗೊಂಡ ಸಮೀಕ್ಷೆಯು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ನೇತೃತ್ವದ ಆಡಳಿತ ಕನ್ಸರ್ವೇಟಿವ್ ಪಕ್ಷ ಹೀನಾಯವಾಗಿ ಸೋಲಲಿದೆ ಎಂದು ಭವಿಷ್ಯ ನುಡಿದಿದೆ. ವಿರೋಧ ಪಕ್ಷವಾದ ಲೇಬರ್ ಪಾರ್ಟಿ 403 ಸ್ಥಾನಗಳನ್ನು ಗೆಲ್ಲುವ ಮುನ್ಸೂಚನೆ ದೊರೆತಿದೆ. ಬಹುಮತಕ್ಕೆ ಅಗತ್ಯವಿರುವ 326 ರಲ್ಲಿ ಆರಾಮವಾಗಿ ಲೇಬರ್ ಪಾರ್ಟಿ ಗಳಿಸುವುದು ಸ್ಪಷ್ಟವಾಗಿ ಸಮೀಕ್ಷೆ ಕಂಡು ಬಂದಿದೆ.

YouGov ಬಿಡುಗಡೆ ಮಾಡಿದ ಹೊಸ ಬಹು-ಹಂತದ ಮಾಡೆಲಿಂಗ್ ಮತ್ತು ಪೋಸ್ಟ್-ಸ್ಟ್ರ್ಯಾಟಿಫಿಕೇಶನ್ (MRP) ಅಂಕಿಅಂಶಗಳು ವಾರಾಂತ್ಯದಲ್ಲಿ ರಿಷಿ ಸುನಕ್’ಗೆ ಆಘಾತ ನೀಡಿದೆ. ಅವರ ಪಕ್ಷ 150 ಸ್ಥಾನಕ್ಕೆ ಕುಸಿತ ಕಾಣಲಿದೆಯೆಂದು ಸಮೀಕ್ಷೆ ಭವಿಷ್ಯ ನುಡಿದಿದೆ.

Latest Indian news

Popular Stories