ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಕೊಡುಗೆಯನ್ನು ಸ್ಮರಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್

ನವದೆಹಲಿ: ಆರ್.ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರ ದೊಡ್ಡದು ಎಂದು ಹೇಳುವ ಮುಖಾಂತರ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಕೊಡುಗೆಯನ್ನು ಸ್ಮರಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆರ್.ಎಸ್.ಎಸ್ ನವದೆಹಲಿಯಲ್ಲಿ ಆಯೋಜಿಸಿರುವ ಮೂರು ದಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತ ಮೋಹನ್ ಭಾಗವತ್, ” ಕಾಂಗ್ರೆಸ್ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ಪಾತ್ರವಹಿಸಿದೆ. ಈ ದೇಶದಕ್ಕೆ ದೊಡ್ಡ ದೊಡ್ಡ ಮಹನೀಯರನ್ನು ನೀಡಿದೆ ಎಂದು ಹೇಳಿದರು.

“ನಮ್ಮ ದೇಶದಲ್ಲಿ ಜನರಿಗೆ ರಾಜಕೀಯ ಇತಿಹಾಸದ ಅರಿವು ಕಡಿಮೆಯಿದೆ. ಅರಿವಿರಬೇಕಾಗಿರುವುದು ಅತೀ ಅಗತ್ಯ. ಕಾಂಗ್ರೆಸ್ ಇತಿಹಾಸದಲ್ಲಿ ಅತ್ಯುತ್ತಮ ಅಂದೋಲನ ಸಂಘಟಿಸಿತ್ತು. ಅತ್ಯಂತ ಪ್ರಮುಖ ವ್ಯಕ್ತಿತ್ವಗಳನ್ನು ದೇಶಕ್ಕೆ ನೀಡಿದೆ ಎಂದು ತಿಳಿಸಿದರು.

Latest Indian news

Popular Stories