ಮಹಿಳಾ ಸಹೋದ್ಯೋಗಿಯೊಂದಿಗೆ ಸರಸ – ಹೋಟೆಲ್‌ನಲ್ಲಿ ಸಿಕ್ಕಿಬಿದ್ದ DSPಗೆ ಕಾನ್‌ಸ್ಟೆಬಲ್ ಆಗಿ ಡಿಮೋಷನ್!

ಲಕ್ನೋ: ಸಹೋದ್ಯೋಗಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದು, ಹೋಟೆಲೊಂದರಲ್ಲಿ ಸಿಕ್ಕಿಬಿದ್ದಿದ್ದ ಉತ್ತರ ಪ್ರದೇಶದ (Uttar Pradesh) ಡಿಎಸ್‌ಪಿ ಅಧಿಕಾರಿಯೊಬ್ಬರನ್ನ ಕಾನ್‌ಸ್ಟೇಬಲ್‌ (Constable) ಆಗಿ ಹಿಂಬಡ್ತಿಗೊಳಿಸಿರುವ ಘಟನೆ ನಡೆದಿದೆ.

ಡಿಎಸ್‌ಪಿ (DSP) ಆಗಿದ್ದಾಗ ಕೃಪಾ ಶಂಕರ್ ಕನೌಜಿಯ ಮೂರು ವರ್ಷಗಳ ಹಿಂದೆ ಮಹಿಳಾ ಕಾನ್‌ಸ್ಟೇಬಲ್‌ ಜೊತೆಗೆ ಹೋಟೆಲ್‌ವೊಂದರಲ್ಲಿ ಸಿಕ್ಕಿಬಿದ್ದಿದ್ದರು ಎಂದು ಮೂಲಗಳು ತಿಳಿಸಿವೆ. ಕನೌಜಿಯಾ ನನ್ನ ಈಗ ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (PCP) ಗೋರಖ್‌ಪುರ ಬೆಟಾಲಿಯನ್‌ನಲ್ಲಿ ಕಾನ್‌ಸ್ಟೆಬಲ್ ಆಗಿ ನಿಯೋಜಿಸಲಾಗಿದೆ.

ಈ ಹಿಂದೆ ಸರ್ಕಲ್‌ ಇನ್ಸ್‌ಪೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದ ಕನೌಜಿಯಾ 2021ರ ಜು.6ರಂದು ಕೌಟುಂಬಿಕ ಕಾರಣಗಳಿಗಾಗಿ ಅಂದಿನ ಉನ್ನಾವೋ ಎಸ್ಪಿ ಅವರಿಂದ ರಜೆ ಪಡೆದಿದ್ದರು. ಆದ್ರೆ ಆತ ಮನೆಗೆ ಹೋಗುವ ಬದಲಿಗೆ ಕಾನ್ಪುರ ಬಳಿಯ ಹೋಟೆಲ್‌ಗೆ ಹೋಗಿದ್ದರು. ಮೊಬೈಲ್‌ ಸ್ವಿಚ್ ಆಫ್‌ ಮಾಡಿಕೊಂಡು ಮಹಿಳಾ ಸಹೋದ್ಯೋಗಿಯೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದರು ಎಂದು ಮೂಲಗಳು ತಿಳಿಸಿವೆ.

ಇದೇ ಸಮಯದಲ್ಲಿ ಆತನ ಪತ್ನಿ ಸಹ ಕನೌಜಿಯಾಗೆ ಕರೆ ಮಾಡಿದ್ದಾರೆ‌, ಫೋನ್‌ ಸ್ವಿಚ್‌ ಆಫ್‌ ಬಂದ ನಂತರ ಉನ್ನಾವೋ ಎಸ್ಪಿಗೆ ಸಹಾಯಕ್ಕಾಗಿ ಕರೆ ಮಾಡಿದ್ದಾರೆ. ಇದರಿಂದ ಅನುಮಾನಗೊಂಡ ಎಸ್ಪಿ ನೆಟ್‌ವರ್ಕ್‌ ಪರಿಶೀಲಿಸಿದಾಗ ಕನೌಜಿಯಾ ಅವರ ಫೋನ್‌ ಕೊನೆಯದ್ದಾಗಿ ಹೋಟೆಲ್‌ನಲ್ಲಿ ಸಕ್ರೀಯಾವಾಗಿದ್ದದ್ದು ಗೊತ್ತಾಗಿದೆ. ನಂತರ ಪೊಲೀಸರ ತಂಡವನ್ನು ಹೋಟೆಲ್‌ಗೆ ಕಳುಹಿಸಿದಾಗ ಸಹೋದ್ಯೋಗಿ ಮಹಿಳೆಯೊಂದಿಗೆ ಸಿಕ್ಕಿಬಿದ್ದಿದ್ದಾರೆ.

ಉನ್ನಾವೊ ಪೊಲೀಸರು ಸಿಒಗೆ ಸಂಬಂಧಿಸಿದ ವೀಡಿಯೊ ಸಾಕ್ಷ್ಯವನ್ನು ತೆಗೆದುಕೊಂಡಿದ್ದರು. ನಂತರ, ಲಕ್ನೋ ರೇಂಜ್ ಪೊಲೀಸ್ ಮಹಾನಿರೀಕ್ಷಕ (IGP) ಅವರ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಿದ್ದರು. ಇದೀಗ ಮೂರು ವರ್ಷಗಳ ನಂತರ ಅವರನ್ನ ಕಾನ್‌ಸ್ಟೇಬಲ್‌ ಹುದ್ದೆಗೆ ಹಿಂಬಡ್ತಿ ನೀಡಲಾಗಿದೆ.

Latest Indian news

Popular Stories