ಟೆಹ್ರಾನ್‌ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಅವರ ಹತ್ಯೆಯು ಇರಾನ್‌ನ ಸಾರ್ವಭೌಮತ್ವದ “ಸ್ಪಷ್ಟ ಉಲ್ಲಂಘನೆ” ಎಂದು ಸೌದಿ ಅರೇಬಿಯಾ ಬುಧವಾರ ಹೇಳಿದೆ.
ಇರಾನ್ ರಾಜಧಾನಿಯಲ್ಲಿ ಫೆಲೆಸ್ತೀನ್ ಇಸ್ಲಾಮಿಸ್ಟ್ ನಾಯಕನನ್ನು ಕೊಂದ ನಂತರ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (ಒಐಸಿ) ಸದಸ್ಯ ಸಭೆಯಲ್ಲಿ ಸೌದಿ ಉಪ ವಿದೇಶಾಂಗ ಸಚಿವರು ಹೇಳಿಕೆ ನೀಡಿದ್ದಾರೆ
“ರಾಜ್ಯಗಳ ಸಾರ್ವಭೌಮತ್ವದ ಯಾವುದೇ ಉಲ್ಲಂಘನೆ ಅಥವಾ ಯಾವುದೇ ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪವನ್ನು” ಸೌದಿ ಅರೇಬಿಯಾ ಖಂಡಿಸುತ್ತದೆ ಎಂದು ಸಚಿವ ವಲೀದ್ ಅಲ್-ಖುರೈಜಿ ಹೇಳಿದರು.