ಕಾರವಾರ : ಶಿರೂರು ಸಮೀಪ ಗುಡ್ಡ ಕುಸಿತದಲ್ಲಿ ಮೃತಪಟ್ಟ ಟ್ಯಾಂಕರ್ ಚಾಲಕ ಚಿಣ್ಣನ್ ಕುಟುಂಬದವರಿಗೆ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ ಅವರು 5 ಲಕ್ಷ ಪರಿಹಾರದ ಆದೇಶ ಪತ್ರ ವಿತರಿಸಿ , ಸಾಂತ್ವನ ಹೇಳಿದರು.
ಚಿಣ್ಣನ್ ಗ್ಯಾಸ್ ತುಂಬಿದ ಟ್ಯಾಂಕರ್ ಚಾಲಕನಾಗಿದ್ದು,ಮಂಗಳೂರು ಕಡೆಯಿಂದ ಹುಬ್ಬಳ್ಳಿಗೆ ಟ್ಯಾಂಕರ್ ಚಲಿಸುತ್ತಿತ್ತು. ಮಂಗಳವಾರ ಬೆಳಿಗ್ಗೆ ಶಿರೂರು ಹೋಟೆಲ್ ನಲ್ಲಿ ಉಪಹಾರ ಮಾಡಲು ಟ್ಯಾಂಕರ್ ನಿಲ್ಲಿಸಿದ್ದರು. ಆಗ ಗುಡ್ಡದ ಮಣ್ಣು ಕುಸಿದು ಟ್ಯಾಂಕರ್ ಹಾಗೂ ಚಾಲಕ ಚಿನ್ನನ್ (45) ಅವರನ್ನು ಗಂಗಾವಳಿ ನದಿಗೆ ತಳ್ಳಿತ್ತು. ಇಂದು ಚಿನ್ನನ್ ಅವರ ಮೃತದೇಹ ಎನ್ ಡಿ ಆರ್ ಎಫ್ ತಂಡಕ್ಕೆ ಸಿಕ್ಕಿತ್ತು. ತಮಿಳು ನಾಡಿನಿಂದ ಟ್ಯಾಂಕರ್ ಮಾಲಿಕ ಹಾಗೂ ಚಿಣ್ಣನ್ ಸಂಬಂಧಿಕರು ಕಾರವಾರಕ್ಕೆ ಆಗಮಿಸಿದ್ದರು. ಚಿಣ್ಣನ್ ಕುಟುಂಬದವರಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸಾಂತ್ವಾನ ಹೇಳಿದರು.
…..