ಭಾರತದ ಟೆನಿಸ್ ದಿಗ್ಗಜ ಸಾನಿಯಾ ಮಿರ್ಜಾರಿಂದ ವಿಚ್ಛೇದನದ ವದಂತಿಗಳ ನಡುವೆ ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾದರು.
ಈ ಹಿಂದೆ ಟ್ವಿಟರ್ ಎಂದು ಕರೆಯಲ್ಪಡುವ X ನಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಮಲಿಕ್ ಶನಿವಾರ ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ವಿವಾಹ ಸಮಾರಂಭದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಮಲಿಕ್ ಜಾವೇದ್ ಜೊತೆ ಡೇಟಿಂಗ್ ಮಾಡುವ ವದಂತಿಗಳು ಸ್ವಲ್ಪ ಸಮಯದವರೆಗೆ ಹರಡಿದ್ದವು, ಪಾಕಿಸ್ತಾನದ ಮಾಜಿ ಕ್ಯಾಪ್ಟನ್ ಕಳೆದ ವರ್ಷ ನಟಿಗೆ ಅವರ ಹುಟ್ಟುಹಬ್ಬದಂದು ಶುಭ ಹಾರೈಸಿದಾಗ ಊಹಾಪೋಹಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿತ್ತು. ಇದೀಗ ವಿವಾಹವಾಗುವುದರೊಂದಿಗೆ ಎಲ್ಲ ಉಹಾಪೋಹಾಗಳಿಗೆ ಬ್ರೇಕ್ ಬಿದ್ದಿದೆ.