ತೋಟದ ವಿದ್ಯುತ್ ತಂತಿ ತಗುಲಿ ಕಾಡೆಮ್ಮೆ ಸಾವು ಶ್ರೀಧರ ಗಣಪತಿ ಹೆಗಡೆ ಬಂಧನ

ಕಾರವಾರ : ತೋಟಕ್ಕೆ ಹಾಕಿದ ಐಬಿಎಕ್ಸ ತಂತಿ ಬೇಲಿಗೆ ಹಾಯಿಸಿದ ವಿದ್ಯುತ್ ಶಾಕ್ ನಿಂದ ಕಾಡೆಮ್ಮೆ ಸಾವನ್ನಪ್ಪಿದ ಘಟನೆ ಸಿದ್ದಾಪುರ ತಾಲೂಕಿನ ಕ್ಯಾದಗಿ ಅರಣ್ಯವಯಲದ ಚಪ್ಪರ ಮನೆ ಗ್ರಾಮದಲ್ಲಿ ನಡೆದಿದೆ.


ಶ್ರೀಧರ ಗಣಪತಿ ಹೆಗಡೆ ಎಂಬುವವರಿಗೆ ಸೇರಿದ ತೋಟಕ್ಕೆ ಹಾಕಿದ ತಂತಿ ಬೇಲಿಗೆ ವಿದ್ಯುತ್ ಹರಿಸಲಾಗಿತ್ತು‌ . ಈ ವಿದ್ಯುತ್ ಶಾಕ್ ನಿಂದ ಕಾಡೆಮ್ಮೆ ಸತ್ತಿರುವುದನ್ನು ಪಶುವೈದ್ಯ ವಿವೇಕ ಹೆಗಡೆ ದೃಢಪಡಿಸಿದ್ದರು. ಅರಣ್ಯ ಗಾರ್ಡ ಹಾಗೂ ಆರ್.ಎಫ್ .ಒ. ನೀಡಿದ ಮಾಹಿತಿ ಆಧರಿಸಿ ತೋಟದ ಮಾಲಿಕ ಶ್ರೀಧರ ಗಣಪತಿ ಹೆಗಡೆಯನ್ನು ಬಂಧಿಸಲಾಗಿದೆ. ಅರಣ್ಯ ಮತ್ತು ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ಅಡಿ ಪ್ರಕರಣ ದಾಖಲಿಸಲಾಗಿದೆ. ಡಿಸಿಎಫ್ ಅಜ್ಜಯ್ಯ ಅವರ ಮಾರ್ಗದರ್ಶನದ ಮೇರೆಗೆ ಡಿಎಫ್ಓ ಕೆ.ಜಿ.ಪ್ರಕಾಶ್ ,‌ಆರ್ ಎಫ್ ಒ ಪಟಗಾರ ಮುಂತಾದವರು ಕಾರ್ಯಾಚರಣೆ ಮಾಡಿ ಶ್ರೀಧರ ಗಣಪತಿ ಹೆಗಡೆ ಗದ್ದೆಮನೆ ಅವರನ್ನು ಬಂಧಿಸಿ,‌ಕಾನೂನು ಕ್ರಮ‌ಕೈಗೊಂಡಿದ್ದಾರೆ. ಐ‌ಬಿಎಕ್ಸ ಬೇಲಿಗೆ ಅಕ್ರಮವಾಗಿ ಹೆಚ್ಚಿನ ವಿದ್ಯುತ್ ಶಕ್ತಿ ಪ್ರಹಿಸುವಂತೆ ಮಾಡಿದ‌ ಪರಿಣಾಮ ಕಾಡು ಕೋಣ ಪ್ರಬೇಧದ ಕಾಡೆಮ್ಮೆ‌ ಸಾವನ್ನಪ್ಪಿತ್ತು.
…..

Latest Indian news

Popular Stories