ಉಡುಪಿ: ಇಂದು ಪ್ರಕಟಗೊಂಡ ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ಶೇ.89.33 ಫಲಿತಾಂಶದೊಂದಿಗೆ 18ನೇ ಸ್ಥಾನಕ್ಕೆ ಇಳಿದಿದೆ.
ಈ ಬಾರಿ ಪರೀಕ್ಷೆ ಬರೆದ 12,980 ರೆಗ್ಯೂಲರ್ ವಿದ್ಯಾರ್ಥಿಗಳಲ್ಲಿ 11,595 ವಿದ್ಯಾರ್ಥಿಗಳು ತೇರ್ಗಡೆಗೊಂಡಿ ದ್ದಾರೆ. 6637 ಬಾಲಕರಲ್ಲಿ 5693 ಮಂದಿ ತೇರ್ಗಡೆಗೊಂಡಿದ್ದರೆ, 6343 ಬಾಲಕಿಯರಲ್ಲಿ 5902 ಮಂದಿ ಉತ್ತೀರ್ಣರಾಗಿದ್ದಾರೆ.
ಉಳಿದಂತೆ ಪರೀಕ್ಷೆ ಬರೆದ 443 ರೆಗ್ಯೂಲರ್ ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 98 ಮಂದಿ (ಶೇ.22.12) ಉತ್ತೀರ್ಣರಾದರೆ, 157 ಮಂದಿ ಖಾಸಗಿ ವಿದ್ಯಾರ್ಥಿಗಳಲ್ಲಿ ಕೇವಲ 17 ಮಂದಿ (ಶೇ.10.83) ತೇರ್ಗಡೆ ಗೊಂಡಿದ್ದಾರೆ. ಪರೀಕ್ಷೆಗೆ ಕುಳಿತ 53 ಮಂದಿ ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ ಒಬ್ಬರು (ಶೇ.1.89) ಮಾತ್ರ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈ ವರ್ಷ ಪರೀಕ್ಷೆಗೆ ಕುಳಿತ ಒಟ್ಟು 13633 ಮಂದಿಯಲ್ಲಿ 11,711 ಮಂದಿ ಪಾಸಾಗಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ಒಟ್ಟು 47 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ. ಇವುಗಳಲ್ಲಿ 12 ಸರಕಾರಿ ಶಾಲೆಗಳಾದರೆ, 7 ಶಾಲೆಗಳು ಅನುದಾನಿತ ಪ್ರಾಥಮಿಕ ಶಾಲೆಗಳು, ಉಳಿದಂತೆ 28 ಅನುದಾನ ರಹಿತ ಶಾಲೆಗಳು ಸಹ ಶೇ.100 ಫಲಿತಾಂಶ ದಾಖಲಿಸಿವೆ.