ರಾಜ್ಯದ ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ: ಪ್ರಣವಾನಂದ ಸ್ವಾಮಿ

ಶಿವಮೊಗ್ಗ: ರಾಜ್ಯದ ಭವಿಷ್ಯದ ಮುಖ್ಯಮಂತ್ರಿ ವಿಜಯೇಂದ್ರ ಆಗಬೇಕು ಎಂಬುದು ನಮ್ಮ ಬಯಕೆ. ಅದು ಯಡಿಯೂರಪ್ಪ ಆಸೆ ಕೂಡ ಹೌದು ಎಂದು ಪ್ರಣವಾನಂದ ಸ್ವಾಮಿ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗದ ಸಾಗರದಲ್ಲಿ ಶಕ್ತಿ ಸಾಗರ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂದಿನ ಮುಖ್ಯಮಂತ್ರಿ ವಿಜಯೇಂದ್ರಯಾಗುತ್ತಾರೆ. ಪ್ರಣಾವಾನಂದ ಸ್ವಾಮೀಜಿ ಸತ್ಯಾಂಶ ಹೇಳುತ್ತಾರೆ. ಯಡಿಯೂರಪ್ಪ ಋಣ ಸಮಾಜ ತೀರಿಸಬೇಕು. ದೇಶ ಕಂಡ ಅಪ್ರತಿಮ ರಾಜಕಾರಣಿ ಯಡಿಯೂರಪ್ಪ. ಮಾಜಿ ಮುಖ್ಯಮಂತ್ರಿ ಮಕ್ಕಳು ಹೇಗೆ ಇರಬೇಕೆಂಬುದು ರಾಘವೇಂದ್ರ, ವಿಜಯೇಂದ್ರ ನೋಡಿ ಕಲಿಯಬೇಕು. ಅವರಿಬ್ಬರಲ್ಲೂ ತಾಳ್ಮೆ ನೋಡಬಹುದು ಎಂದರು.

ಸಮಾವೇಶದಲ್ಲಿ ಮಾತನಾಡಿದ ವಿನಯ್ ಗುರೂಜಿ ಅವರು, ಬಿ.ವೈ.ರಾಘವೇಂದ್ರ ಮಾಡಿರುವ ಕೆಲಸದಿಂದ ಅವರು ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ. ಪ್ರಮಾಣವಾಗಿ ಹೇಳುತ್ತೇನೆ, ಅವರಿಗೆ ಭಗವಂತ ಪ್ರಮಾಣ ವಚನ ಸ್ವೀಕಾರ ಮಾಡುವ ಅನುಗ್ರಹ ಮಾಡುತ್ತಾರೆ. ರಾಘವೇಂದ್ರ ಕೇಂದ್ರ ಸಚಿವರಾಗುತ್ತಾರೆ ಎಂದು ಭವಿಷ್ಯ‌ ನುಡಿದರು.

Latest Indian news

Popular Stories