ಅಪ್ಪ ಮಕ್ಕಳ ಕೈಯಿಂದ ಬಿಜೆಪಿಯನ್ನು ಬಿಡುಗಡೆ ಮಾಡಲು ಹೋರಾಟ: ಈಶ್ವರಪ್ಪ

ಮಂಗಳೂರು: ಬಿಜೆಪಿಯ ಸಿದ್ಧಾಂತವನ್ನು ಗಾಳಿಗೆ ತೂರಿ ಕರ್ನಾಟಕದಲ್ಲಿ ಬಿಜೆಪಿಯನ್ನು ಮುನ್ನಡೆಸಲಾಗುತ್ತಿದೆ. ವಂಶ ಪಾರಂಪರ್ಯ ರಾಜಕಾರಣದಿಂದ ದೂರವಿರುವ ಬಿಜೆಪಿ ಕರ್ನಾಟಕದಲ್ಲಿ ಮಾತ್ರ ಕುಟುಂಬ ರಾಜಕಾರಣ ಮಾಡುತ್ತಿದೆ. ಅಪ್ಪ ಮಕ್ಕಳ ಕೈಯಿಂದ ಬಿಜೆಪಿಯನ್ನು ಬಿಡುಗಡೆ ಮಾಡಿಸುವುದೇ ನನ್ನ ಗುರಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ‌.


ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕದ ಬಿಜೆಪಿಯಲ್ಲಿ ಕಾಂಗ್ರೆಸ್ ಸಂಸ್ಕೃತಿ ಬಂದಿದೆ. ಯಡಿಯೂರಪ್ಪ ಮನೆಯಲ್ಲಿ ಅಪ್ಪ – ಮಕ್ಕಳು ಎಲ್ಲರಿಗೂ ಅಧಿಕಾರವಿದೆ. ಕುಟುಂಬದ ರಾಜಕಾರಣವನ್ನು ಕರ್ನಾಟದಿಂದ ಮುಕ್ತ ಮಾಡಬೇಕು ಎನ್ನುವವರಿಗೆ ನೋವಾಗಿದೆ. ನಾವೆಲ್ಲ ಸಾಮೂಹಿಕ ನೇತೃತ್ವದಲ್ಲಿ ಪಕ್ಷ ಕಟ್ಟಿದ್ದೇವೆ. ಆದರೆ ಇಂದು ಸಾಮೂಹಿಕ ನೇತೃತ್ವ ಅಳಿದು ಸರ್ವಾಧಿಕಾರಿದತ್ತ ಹೋಗಿದೆ. ಹಿಂದುತ್ವ ಹೋಗಿ ಜಾತೀಯತೆ ಬಂದಿದೆ. ಇದರ ವಿರುದ್ಧ ನಾನು ಲೋಕಸಭೆಗೆ ಸ್ಪರ್ಧಿಸಿದ್ದೇನೆ ಎಂದು ಹೇಳಿದರು.


ವಿಧಾನ ಪರಿಷತ್ ಸ್ಥಾನಕ್ಕೆ ರಘುಪತಿ ಭಟ್ ಸ್ಪರ್ಧಿಸುತ್ತಿದ್ದು, ಅವರಿಗೆ ಬೆಂಬಲ ನೀಡಬೇಕಿದೆ. ಈ ಮೂಲಕ ಬಿಜೆಪಿಯನ್ನು ಶುದ್ಧೀಕರಿಸುವ ಕೆಲಸಕ್ಕೆ ಶಕ್ತಿ ನೀಡಬೇಕಿದೆ ಎಂದು ಅವರು ಹೇಳಿದರು.

Latest Indian news

Popular Stories