ಸಿಡ್ನಿ ಮಾಲ್‌ನಲ್ಲಿ ಸಿಕ್ಕಸಿಕ್ಕವರಿಗೆ ಚೂರಿ ಇರಿತ: 10 ಮಂದಿ ಸಾವು; ಆರೋಪಿಗೆ ಗುಂಡಿಟ್ಟ ಪೊಲೀಸರು, ಭೀಕರ ದೃಶ್ಯ!

ಸಿಡ್ನಿ: ಸಿಡ್ನಿಯ ಬೋಂಡಿ ಮಾಲ್‌ನಲ್ಲಿ ಆಗಂತುಕನೊಬ್ಬ ಸಿಕ್ಕ ಸಿಕ್ಕವರಿಗೆ ಚೂರಿ ಇರಿದಿದ್ದು ಕನಿಷ್ಠ 10 ಜನರು ಸಾವನ್ನಪ್ಪಿದ್ದು ಹಲವರು ಚೂರಿ ಇರಿತಕ್ಕೆ ಒಳಗಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಬೋಂಡಿ ಜಂಕ್ಷನ್‌ನಲ್ಲಿರುವ ವೆಸ್ಟ್‌ಫೀಲ್ಡ್ ಮಾಲ್‌ನಲ್ಲಿ ದಾಳಿ ನಡೆದಿದೆ ಎಂದು ವರದಿಗಳು ಸೂಚಿಸಿವೆ. ಸಾಮೂಹಿಕ ಚೂರಿ ಇರಿತ ವರದಿಯಾದ ನಂತರ ಆಗಂತುಕನಿಗೆ ಪೊಲೀಸರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಕೋರನಿಗೆ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ ಎಂದು ನ್ಯೂ ಸೌತ್ ವೇಲ್ಸ್ ಆಂಬ್ಯುಲೆನ್ಸ್ ತಿಳಿಸಿದೆ.

Latest Indian news

Popular Stories