ಸ್ಪೈಸ್​​​ಜೆಟ್ ಏರ್​​​​​ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷ: 12 ಗಂಟೆಗಳಿಂದ ವಿಮಾನದಲ್ಲೇ ಪ್ರಯಾಣಿಕರು ಲಾಕ್, ಆಕ್ರೋಶ

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಹಾರಬೇಕಿದ್ದ ಸ್ಪೈಸ್​​​ಜೆಟ್ ಏರ್​​​​​ಲೈನ್ಸ್ ಸಿಬ್ಬಂದಿ ಎಡವಟ್ಟಿನಿಂದಾಗಿ ಪ್ರಯಾಣಿಕರು 12 ಗಂಟೆಗಳ ಕಾಲ ವಿಮಾನದಲ್ಲೇ ಲಾಕ್ ಆಗಿ ಪರದಾಡಿದ ಘಟನೆಯೊಂದು ವರದಿಯಾಗಿದೆ.

ನಿನ್ನೆ ಸಂಜೆ ದೆಹಲಿಯಿಂದ ಬೆಂಗಳೂರಿಗೆ ಹೋಗುವ SG 8151ನ ಸ್ಪೈಸ್​​​ಜೆಟ್ ಏರ್​​​​​ಲೈನ್ಸ್ ವಿಮಾನವನ್ನು ಏರಿದ ಸುಮಾರು 60 ಪ್ರಯಾಣಿಕರು ಸತತ 12 ಗಂಟೆಗಳಿಗೂ ಅಧಿಕ ಕಾಲ ವಿಮಾನದೊಳಗೆ ಲಾಕ್ ಆಗಿ ಪರದಾಡಿದ್ದಾರೆ.

ತಾಂತ್ರಿಕ ದೋಷ ಎಂದು ನಿನ್ನೆ ಸಂಜೆಯಿಂದ ಬೆಳಗ್ಗೆ ವರೆಗೂ ದೆಹಲಿ ಏರ್ಪೋಟ್​ನಲ್ಲೆ ಫ್ಲೈಟ್ ನಿಲ್ಲಿಸಲಾಗಿದ್ದು ಪ್ರಯಾಣಿಕರನ್ನು ಹೊರಗೆ ಬಿಡದೆ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ. ಅಲ್ಲದೆ, ಪ್ರಯಾಣಿಕರಿಗೆ ಊಟ, ತಿಂಡಿ ವ್ಯವಸ್ಥೆಯೂ ಮಾಡದೆ ಫ್ಲೈಟ್​ನಲ್ಲೇ ಕೂರಿಸಿದ್ದಾರೆ. ಈ ವೇಳೆ ಆಚೆಯೂ ಹೋಗಲಾಗದೆ ಒಳಗೂ ಇರಲಾಗದೆ ಪ್ರಯಾಣಿಕರು ಪರದಾಡಿದ್ದು, ಆಕ್ರೋಶ ಹೊರ ಹಾಕಿದ್ದಾರೆ.

ಸ್ಪೈಸ್​​​ಜೆಟ್ ಏರ್​​​​​ಲೈನ್ಸ್ ವಿಮಾನ ನಿನ್ನೆ ರಾತ್ರಿ 7.40ಕ್ಕೆ ದೆಹಲಿಯ ಟರ್ಮಿನಲ್ 3 ಯಿಂದ ಟೇಕಾಫ್ ಆಗಬೇಕಿತ್ತು. ಆದರೆ, ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ಟೇಕಾಫ್ ಆಗಿಲ್ಲ. ಬೆಳಗಿನ ಜಾವ 7 ಗಂಟೆಯಾದರೂ ವಿಮಾನ ದೆಹಲಿಯಿಂದ ಹೊರಡಿಲ್ಲ. ಆದಷ್ಟು ಬೇಗ ಟೇಕಾಫ್ ಮಾಡುತ್ತೇವೆಂದು ಸಿಬ್ಬಂದಿ ತಿಳಿಸಿದ್ದಾರೆ.

Latest Indian news

Popular Stories