ಬೆಂಗಳೂರು: ಬೆಂಗಳೂರು ನಗರದ ಮಾದಾವರದಿಂದ (ಬಿಐಇಸಿ) ತುಮಕೂರು ನಗರಕ್ಕೆ ಮೆಟ್ರೊ ವಿಸ್ತರಿಸುವ ಸಂಬಂಧ ಸಾಧ್ಯಾಸಾಧ್ಯತೆ ಅಧ್ಯಯನ ವರದಿಗೆ ಬೆಂಗಳೂರು ಮೊಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಟೆಂಡರ್ ಕರೆದಿದೆ.
ಮುಂದಿನ ಆರು ತಿಂಗಳೊಳಗೆ ಉತ್ತರ ಬೆಂಗಳೂರಿನ ಮಾದಾವರದಿಂದ ತುಮಕೂರಿನವರೆಗೆ 52.41 ಕಿ.ಮೀ. ಉದ್ದದ ಮೆಟ್ರೊ ಮಾರ್ಗದ ಸಾಧ್ಯಾಸಾಧ್ಯತೆ ಬಗ್ಗೆ ಅಧ್ಯಯನ ಮಾಡಲು ಬಿಡ್‌ಗಳನ್ನು ಆಹ್ವಾನಿಸಿದೆ. ಸರಕಾರಿ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಡಿ ಬಿಡ್ ಆಹ್ವಾನಿಸಲಾಗಿದೆ. ಇದು ಸಾಧ್ಯವಾಗಿದ್ದೇ ಆದಲ್ಲಿಅಂತರ ಜಿಲ್ಲೆಗಳ ನಡುವೆ ಸಂಚರಿಸುವ ಮೊದಲ ಮೆಟ್ರೊ ರೈಲು ಎನ್ನುವ ಹೆಗ್ಗಳಿಕೆ ‘ನಮ್ಮ ಮೆಟ್ರೊ’ ಪಾತ್ರವಾಗಲಿದೆ.
2024-25 ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಮಕೂರು ಮತ್ತು ದೇವನಹಳ್ಳಿಗೆ ಮೆಟ್ರೊ ಮಾರ್ಗಗಳನ್ನು ಘೋಷಿಸಿದ್ದಾರೆ.