ಪ.ಬ ಶಿಕ್ಷಕ ಹಗರಣ ತನಿಖೆಗೆ ಆದೇಶಿಸಿದ್ದ ನ್ಯಾಯಾಧೀಶ ನಾಳೆ ರಾಜೀನಾಮೆ? – ರಾಜಕೀಯಕ್ಕೆ ಎಂಟ್ರಿ ಸಾಧ್ಯತೆ!

ಕೋಲ್ಕತಾ: ಕಳೆದ ವರ್ಷ ಪಶ್ಚಿಮ ಬಂಗಾ­ಲದಲ್ಲಿ ನಡೆದಿದ್ದ ಶಿಕ್ಷಕ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆದೇಶಿಸಿದ್ದ ಕಲ್ಕತ್ತಾ ಹೈಕೋರ್ಟ್‌ ನ್ಯಾಯ­ಮೂರ್ತಿ ಅಭಿಜಿತ್‌ ಗಂಗೋಪಾಧ್ಯಾಯ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ.

ಜನರ ಸೇವೆ ಮಾಡುವುದಕ್ಕಾಗಿ ಸಕ್ರಿಯ ರಾಜಕಾರಣಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿರುವ ಅವರು, ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿವೆ. “ಜನರ ಸೇವೆ ಮಾಡಲು ನಾನು ರಾಜಕೀಯಕ್ಕೆ ಸೇರಲು ಬಯಸುತ್ತೇನೆ. ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಬೇಕು ಎಂಬುದರ ಕುರಿತಾಗಿ ನಿರ್ಧಾರ ಕೈಗೊಂಡಿಲ್ಲ’ ಎಂದಿದ್ದಾರೆ.

Latest Indian news

Popular Stories