ಮಡಿಕೇರಿ: ನಿನ್ನೆ ದಿನ ದಿನಾಂಕ 05 ರಂದು ಕುಶಾಲನಗರದಲ್ಲಿ ದ್ವಿ ಚಕ್ರ ವಾಹನ ಶೋರೂಂನಲ್ಲಿ ಕ್ಷುಲ್ಲಕ ಕಾರಣದಿಂದ ಇರಿತಕೊಳಕ್ಕಾಗಿ ಪ್ರಾಣ ಕಳೆದುಕೊಂಡ ಯುವಕನ ಮೃತದೇಹ ಮೈಸೂರು ಆಸ್ಪತ್ರೆಯಿಂದ ತರಲಾಗಿ ಸಂಜೆ ವೇಳೆಗೆ ಮಡಿಕೇರಿಯಲ್ಲಿ ಗಣಪತಿ ಬೀದಿಯಲ್ಲಿ ಅಂತಿಮ ವಿಧಿವಿಧಾನಗಳನ್ನು ನಡೆಸಿ ಮಡಿಕೇರಿಯ ಖಬರ ಸ್ಥಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಮೃತ ಸಾಜಿದ್ ಸೇರಿದಂತೆ ನಾಲ್ಕು ಗಂಡು ಮಕ್ಕಳನ್ನು ಹೊಂದಿರುವ ತಾಯಿ ಉನೈಸ ತಂದೆ ಸೌಕತ್ ಹಾಗೂ
ಕುಟುಂಬಸ್ಥರ ಆಕ್ರಂದನ ಕೇಳಿ ಬಂದಿತು. ಪೋಲಿಸರು ಬಿಗಿ ಬಂದೋ ಬಸ್ತ್ ಏರ್ಪಡಿಸಿದ್ದರು. ನೂತನ ಡಿ.ವೈ.ಎಸ್ ಪಿ ಮನೊಜ್ ಕುಮಾರ್ ಸ್ಥಳದಲ್ಲಿ ಹಾಜರಿದ್ದರು. ಕೊಲೆ ಆರೋಪಿ ಶ್ರೀ ನಿಧಿಯನ್ನು ಬಂಧಿಸಲಾಗಿದೆ.
ಐವತ್ತು ಲಕ್ಷ ರೂ ಪರಿಹಾರಕ್ಕೆ ಆಗ್ರಹ :
ಎಸ್ ಡಿ.ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ಆರೋಪಿಯ ಅಂಗಡಿಯ ಪರವಾನಗಿಯನ್ನು ರದ್ದುಪಡಿಸಿ ಶೋ ರೂಮನ್ನು ಮುಟ್ಟುಗೋಲು ಹಾಕಬೇಕೆಂದು ಹೇಳಿದರು.
ಅಂಗಡಿಗೆ ಆಗಮಿಸುವ ಗ್ತಾಹಕರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸುವ ಬದಲು ಈ ರೀತಿ ಕ್ಷುಲ್ಲಕ ವಿಚಾರಕ್ಕೆ ಇರಿದು ಜೀವ ತೆಗೆದಿರುವುದು ಘೋರ ಕೃತ್ಯವಾಗಿದೆ.ಮೃತನ ಕುಟುಂಬಕ್ಕೆ ಐವತ್ತು ಲಕ್ಷ ಪರಿಹಾರ ನೀಡಬೇಕೆಂದು ಸರಕಾರವನ್ನು ಆಗ್ರಹಿಸಿದರು..