ಪಾಕಿಸ್ತಾನ ಪರ ಯಾವ ಘೋಷಣೆ ಕೂಗಿಲ್ಲ;ಸುಳ್ಳು ಸುದ್ದಿಗೆ ಕಾನೂನು ಕೂಡ ಇದೆ | ಬಿಜೆಪಿಯವರು ಹತಾಶರಾಗಿ ಆರೋಪ – ಸಚಿವ ಪ್ರಿಯಾಂಕ್ ಖರ್ಗೆ

ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ಕಾಲ್ಪನಿಕ ಘಟನೆಯಾಗಿದೆ ಎಂದಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಗೆ ಮುಖಭಂಗವಾಗಿದೆ. ಘೋಷಣೆ ಕೂಗಿರುವ ಆಡಿಯೋದಲ್ಲಿ ಸೈಯದ್ ಸಾಬ್, ನಾಸಿರ್ ಹುಸೇನ್ ಜಿಂದಾಬಾದ್ ಅಂತ ಹೇಳಿದ್ದಾರೆ. ನಾವು ಜವಬ್ದಾರಿಯುತವಾಗಿಯೇ ಪರಿಶೀಲನೆ ಮಾಡಲು ಹೇಳಿದ್ದೆವು. ಪಾಕಿಸ್ತಾನದ ಪರವಾಗಿ ಯಾವುದೇ ಘೋಷಣೆ ಕೂಗಿಲ್ಲ. ವಿಡಿಯೋ ತುಣುಕುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೂ ಕಳುಹಿಸಿಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕೆಲವು ಮಾಧ್ಯಮದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಬಗ್ಗೆ ವರದಿಯಾಗಿವೆ. ಖಾಸಗಿಯಾಗಿ ಆಡಿಯೋ ಚೆಕ್ ಮಾಡಲಾಗಿದೆ. ಮಾಧ್ಯಮಗಳು ಸರ್ಕಾರವನ್ನು ನೇಣಿಗೆ ಹಾಕಲು ಸಿದ್ಧವಾಗಿದ್ದರೆ ನಾವೇನು ಮಾಡಲು ಆಗುತ್ತದೆ? ಘೋಷಣೆ ಕೂಗಿಲ್ಲ ಅಂತ ಹೇಳಿದ್ದೇನೆ. ಸಮರ್ಥನೆ ನಾನು ಮಾಡಿಲ್ಲ. ಸರ್ಕಾರದಿಂದ 11 ಗಂಟೆಗೆ ರಿಪೋರ್ಟ್ ಬರುತ್ತದೆ ನೋಡೋಣ. ಇದು ವೈಯಕ್ತಿಕ ಘೋಷಣೆ, ಪಕ್ಷದ ಘೋಷಣೆ ಅಲ್ಲ. ಸುಮ್ಮನೇ ಆರೋಪ ಮಾಡಲಾಗದು. ಸುಳ್ಳು ಸುದ್ದಿಗೆ ಕಾನೂನು ಕೂಡ ಇದೆ. ಬಿಜೆಪಿಯವರು ಹತಾಶರಾಗಿ ಆರೋಪ ಮಾಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Latest Indian news

Popular Stories