ಬಹು ಹಂತದ ಭದ್ರತಾ ಯೋಜನೆ ಅನ್ವಯ ಅಯೋಧ್ಯಾ ನಗರವು ಪೊಲೀಸರ ಭದ್ರಕೋಟೆಯಾಗಿ ಮಾರ್ಪಾಡಾಗಿದೆ. ಈಗಾಗಲೇ ಎನ್‌ಎಸ್‌ಜಿ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್)ಯ ತಂಡಗಳು ಸೇರಿದಂತೆ ನೂರಾರು ಪೊಲೀಸ್ ಸಿಬ್ಬಂದಿಯನ್ನು ಅಯೋಧ್ಯೆಯಲ್ಲಿ ನಿಯೋಜಿಸಲಾಗಿದೆ.
“ಅಯೋಧ್ಯೆಯಲ್ಲಿ ಸಿಎಪಿಎಫ್ 7 ತುಕಡಿಗಳು, ಎರಡು ಎನ್‌ಎಸ್‌ಜಿ ಸ್ನೆ„ಪರ್ ತಂಡ, ಎರಡು ಡ್ರೋನ್ ನಿಗ್ರಹ ವ್ಯವಸ್ಥೆ, 25 ವಿಆರ್ ಕಾರ್, 10 ವಾಹನ ದಲ್ಲಿ ಅಳವಡಿಸಿದ ಜಾಮರ್‌ಗಳು, ಆರು ವಾಹನದಲ್ಲಿ ಅಳವಡಿಸಿದ ಎಕ್ಸ್ ರೇ ಬ್ಯಾಗೇಜ್ ಸ್ಕಾನರ್‌ಗಳನ್ನು ನಿಯೋಜಿ ಸ ಲಾಗಿದೆ’ ಎಂದು ಉ.ಪ್ರದೇಶ ಪೊಲೀಸ್ ವಿಶೇಷ ಮಹಾ ನಿರ್ದೇಶಕ ಪ್ರಶಾಂತ್ ಕುಮಾರ್, ತಿಳಿಸಿದ್ದಾರೆ.
10,000 ಸಿಸಿಟಿವಿ: ಅಯೋಧ್ಯೆಯಲ್ಲಿ 10,000 ಸಿಸಿಟಿವಿಗಳನ್ನು ಅಳವಡಿಸ ಲಾಗಿದೆ. ರಾಸಾಯನಿಕ, ಜೈವಿಕ, ವಿಕಿರಣ, ಪರಮಾಣು ಸೇರಿದಂತೆ ಯಾವುದೇ ರೀತಿಯ ದಾಳಿಯನ್ನು ಎದುರಿಸುವ ಸಾಮರ್ಥ್ಯವುಳ್ಳ ಎನ್‌ಡಿಆರ್‌ಎಫ್(ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ತಂಡವನ್ನು ನಿಯೋಜಿಸಲಾಗಿದೆ.