ಧಾರಾಕಾರ ಮಳೆ, ಭೂ ಕುಸಿತ-ಬದರಿನಾಥ್‌ ರಾಷ್ಟ್ರೀಯ ಹೆದ್ದಾರಿ ಬಂದ್

ಉತ್ತರಾಖಂಡ್(ಚಮೋಲಿ): ಉತ್ತರಾಖಂಡದ ಬದರಿನಾಥ್‌ ರಾಷ್ಟ್ರೀಯ ಹೆದ್ದಾರಿ ಸಮೀಪದ ಚಮೋಲಿಯ ಪಾತಾಳ್‌ ಗಂಗಾ ಲಾಂಗ್ಸಿ ಸುರಂಗದ ಬಳಿ ಬುಧವಾರ (ಜುಲೈ10) ಭಾರೀ ಪ್ರಮಾಣದ ಗುಡ್ಡ ಕುಸಿತ ಸಂಭವಿಸಿದ್ದು, ಇದರ ಪರಿಣಾಮ ಜೋಶಿಮಠ-ಬದರಿನಾಥ್‌ ಸಂಪರ್ಕಿಸುವ ನ್ಯಾಷನಲ್‌ ಹೈವೇ 7 ಬಂದ್‌ ಅಗಿದೆ.‌

ಚಮೋಲಿ ಪೊಲೀಸರು ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿರುವ ವಿಡಿಯೋದಲ್ಲಿ, ಗುಡ್ಡದ ಮೇಲಿಂದ ಭಾರೀ ಗಾತ್ರದ ಕಲ್ಲು ಕುಸಿದು ಬೀಳುತ್ತಿರುವ ದೃಶ್ಯವಿದ್ದು, ಇದು ರಸ್ತೆ ಮೇಲೆ ಬಿದ್ದಿದ್ದರಿಂದ ಈ ಮಾರ್ಗ ಬಂದ್‌ ಆಗಿರುವುದಾಗಿ ವರದಿ ವಿವರಿಸಿದೆ.

ಮಂಗಳವಾರ ಕೂಡಾ ಇಂತಹ ಘಟನೆ ನಡೆದಿದ್ದು, ಜೋಶಿಮಠ ಸಮೀಪದ ಚುಂಡು ಧಾರ್‌ ನಲ್ಲಿ ಗುಡ್ಡ ಕುಸಿದು ಬಿದ್ದಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಬಂದ್‌ ಆಗಿತ್ತು. ರಾಷ್ಟ್ರೀಯ ಹೆದ್ದಾರಿ ಬಂದ್‌ ಆಗಿದ್ದರಿಂದ ಚಾರ್‌ ಧಾಮ್‌ ಯಾತ್ರೆಗೆ ತೆರಳುತ್ತಿರುವ ಯಾತ್ರಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.

ದೇಶದ ಹಲವೆಡೆ ಭಾರೀ ಮಳೆ ಸುರಿಯುತ್ತಿದ್ದು, ಮುಂಬೈ, ಕರ್ನಾಟಕದ ಕೆಲವೆಡೆ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿರುವುದಾಗಿ ತಿಳಿಸಿದೆ.

Latest Indian news

Popular Stories