ಶಿರಸಿಯ ಮಂಜುಗುಣಿ ಹತ್ತಿರ ಪ್ರವಾಸಿ ಬಸ್ ಪಲ್ಟಿ: 12 ಜನ ಪ್ರವಾಸಿಗರಿಗೆ ಗಾಯ

ಕಾರವಾರ: ಶಿರಸಿ ತಾಲೂಕಿನ ಮಂಜುಗುಣಿ ಹತ್ತಿರ ಪ್ರವಾಸಿ ಬಸ್ ಪಲ್ಟಿಯಾಗಿದ್ದು, ಅದರಲ್ಲಿದ್ದ ಪ್ರವಾಸಿಗರ ಪೈಕಿ 12 ಜನ ಪ್ರವಾಸಿಗರು ಗಾಯಗೊಂಡ ಘಟನೆ ನಡೆದಿದೆ. ತಕ್ಷಣ ಅವರನ್ನು ಮತ್ತೊಂದು ಪ್ರವಾಸಿ ವಾಹನದಲ್ಲಿ ಶಿರಸಿ ಟಿ ಎಸ್ ಎಸ್ ಆಸ್ಪತ್ರೆಗೆ ದಾಖಲಿಸಿ,‌ಚಿಕಿತ್ಸೆ ಕೊಡಲಾಗುತ್ತಿದೆ. ಮಳೆ ಬಿದ್ದ ಕಾರಣ ರಸ್ತೆ ಪಕ್ಕ ನೆಲ ಹಸಿಯಾಗಿತ್ತು.‌ ಪ್ರವಾಸಿ ವಾಹನ ರಸ್ತೆ ಬಿಟ್ಟು ಪಕ್ಕಕ್ಕೆ ಸರಿದಾಗ ನೆಲದಲ್ಲಿ ಹುಗಿದು ಪಲ್ಟಿಯಾಯಿತು ಎನ್ನಲಾಗಿದೆ. ಶಿರಸಿ ಗ್ರಾಮೀಣ‌ ಪೋಲೀಸರು ಸ್ಥಳಕ್ಕೆ ಧಾವಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಬಳ್ಳಾರಿ ಯಿಂದ ಇಡಗುಂಜಿಗೆ ಪ್ರವಾಸಿಗರು ಸ್ವಂತ ಎರಡು ಮಿನಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

Latest Indian news

Popular Stories