ನಿಂತಿದ್ದ ಬಸ್’ಗೆ ಟ್ರಕ್ಕ್ ಡಿಕ್ಕಿ : ಹನ್ನೊಂದು‌ ಮಂದಿ ಮೃತ್ಯು

ಭರತಪುರ:

ರಾಜಸ್ಥಾನದ ಭರತ್‌ಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆ. ಬಸ್ ರಾಜಸ್ಥಾನದ ಪುಷ್ಕರ್‌ನಿಂದ ಉತ್ತರ ಪ್ರದೇಶದ ವೃಂದಾವನಕ್ಕೆ ತೆರಳುತ್ತಿದ್ದಾಗ ಮುಂಜಾನೆ 4.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರಕ್ ಹಿಂದಿನಿಂದ ಡಿಕ್ಕಿ ಹೊಡೆದಂತಹ ಸಂದರ್ಭದಲ್ಲಿ ಇಂಧನ ಖಾಲಿಯಾಗಿ ಲಖನ್‌ಪುರ ಪ್ರದೇಶದ ಅಂಟ್ರಾ ಫ್ಲೈಓವರ್‌ನಲ್ಲಿ ಬಸ್ ನಿಂತಿತ್ತು. ಐವರು ಪುರುಷರು ಮತ್ತು ಆರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ ತನ್ನ ದುರಸ್ತಿ ಕಾರ್ಯ ನಡೆಯುತ್ತಿರುವಾಗ ಹೆದ್ದಾರಿಯಲ್ಲಿ ನಿಂತಿತ್ತು. ಕೆಲವು ಪ್ರಯಾಣಿಕರು ಬಸ್‌ನಲ್ಲಿದ್ದರೆ ಕೆಲವರು ಡಿಕ್ಕಿ ಸಂಭವಿಸಿದಾಗ ಹೊರಗೆ ನಿಂತಿದ್ದರು” ಎಂದು ಭರತ್‌ಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮೃದುಲ್ ಕಚವಾ ಹೇಳಿದ್ದಾರೆ.

ಅಪಘಾತದ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Latest Indian news

Popular Stories