Featured StoryUttara Kannada
ಸಕಲ ಸರ್ಕಾರಿ ಗೌರವ ದೊಂದಿಗೆ ತುಳಸಿ ಗೌಡ ಪಂಚಭೂತಗಳಲ್ಲಿ ಲೀನ | ಅಂತ್ಯಕ್ರಿಯೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ , ಶಾಸಕ ಸೈಲ್ ಭಾಗಿ

ಕಾರವಾರ: ಪರಿಸರವನ್ನು ಬದುಕಿನ ಉಸಿರಾಗಿಸಿಕೊಂಡಿದ್ದ, ಪರಿಸರ ಪ್ರೇಮಿ, ವೃಕ್ಷಮಾತೆ ತುಳಸಿ ಗೌಡರ ಅಂತ್ಯಕ್ರಿಯೆ ಮಂಗಳವಾರ ಸರ್ಕಾರಿ ಗೌರವದೊಂದಿಗೆ ನೆರವೇರಿತು.
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಶಾಸಕ ಸತೀಶ್ ಸೈಲ್ , ಹಾಲಕ್ಕಿ ಸಮಾಜದ ಮುಖಂಡರು, ಡಿಎಫ್ ಒ ರವಿಶಂಕರ್ ಸೇರಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪುಷ್ಪಗುಚ್ಚ ಇಟ್ಟು ಅಂತಿಮ ನಮನ ಸಲ್ಲಿಸಿದರು.
ತುಳಸಿ ಗೌಡರಿಗೆ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರುಸುವ ಮೂಲಕ ಸರ್ಕಾರಿ ಗೌರವ ಸಲ್ಲಿಸಲಾಯಿತು.
ಅಂಕೋಲಾ ತಾಲೂಕಿನ ಹೊನ್ನಳ್ಳಿಯ ಅವರ ಮನೆಯ ಸಮೀಪದ ಗದ್ದೆಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿ ಗೌಡ ಪಂಚಭೂತಗಳಲ್ಲಿ ಲೀನವಾದರು. ತುಳಸಿ ಅವರ ಪ್ರತಿಮೆ ಹಾಗೂ ಉದ್ಯಾನವನಕ್ಕೆ ಅವರ ಹೆಸರಿಡುವ ಬಗ್ಗೆ ಅನೌಪಚಾರಿಕ ಚರ್ಚೆ ನಡೆಯಿತು.
……