Featured Story
ನೌಕಾನೆಲೆಯ ಮಾಹಿತಿ ,ಚಿತ್ರವನ್ನು ಸಂಗ್ರಹಿಸುತ್ತಿದ್ದ ಇಬ್ಬರು ವಶಕ್ಕೆ : ಎನ್ ಐಎ ದಾಳಿ

ಕಾರವಾರ : ನೌಕಾನೆಲೆಯ ಮಾಹಿತಿ ,ಚಿತ್ರವನ್ನು ಸಂಗ್ರಹಿಸುತ್ತಿದ್ದ ಯುವಕರ ಮೇಲೆ ಎನ್ ಐಎ ದಾಳಿ ಮಾಡಿ ಇಬ್ಬರು ಯುವಕರನ್ನು ಇಂದು ನಸುಕಿನ ಜಾವ ಬಂಧಿಸಿದೆ.
ಕಾರವಾರ ತಾಲೂಕಿನ ಮುದಗಾ ಗ್ರಾಮದ ವೇತನ ತಾಂಡೇಲ, ಅಂಕೋಲಾ ತಾಲೂಕಿನ ಹಳವಳ್ಳಿ ಗ್ರಾಮದ ಅಕ್ಷಯ ನಾಯ್ಕ ರನ್ನು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರ ಮೇಲೆ ಕಳೆದ ಅಗಸ್ಟ 24 ರಂದು ಬಂಧಿಸಿ, ವಿಚಾರಣೆ ಮಾಡಿ , ಬಿಟ್ಟಿತ್ತು . ಆಗ ಈ ವಿಚಾರಣೆಯಲ್ಲಿ ತೋಡೂರಿನ ಒಬ್ಬ ಯುವಕನೂ ಇದ್ದ.ಎನ್ ಐಎ ಹೈದರಾಬಾದ್ ಶಾಖೆಯ ಅಧಿಕಾರಿಗಳು ದಾಳಿ ಮಾಡಿದ್ದರು . ನಿನ್ನೆ ಸ್ಥಳೀಯ ಪೊಲೀಸರ ಸಹಕಾರ ಪಡೆದು ಇಂದು ಬೆಳಗಿನ ಜಾವ ಇಬ್ಬರು ಯುವಕರನ್ನು ಮತ್ತೆ ವಶಕ್ಕೆ ಪಡೆದಿದ್ದಾರೆ.