ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್: ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್ – VIDEO

ಆಸ್ಟ್ರೇಲಿಯಾ ತಂಡದ ವೇಗಿ ಪ್ಯಾಟ್ ಕಮಿನ್ಸ್ ಅವರು ಟಿ20 ವಿಶ್ವಕಪ್ ನಲ್ಲಿ ಹೊಸ ವಿಶ್ವದಾಖಲೆ ಬರೆದಿದ್ದಾರೆ. ವಿಶ್ವಕಪ್ ನ ಸತತ ಎರಡು ಪಂದ್ಯಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಖ್ಯಾತಿಗೆ ಪ್ಯಾಟ್ ಕಮಿನ್ಸ್ ಪಾತ್ರರಾಗಿದ್ದಾರೆ.

 

ಕಿಂಗ್ಸ್ ಟೌನ್ ನಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ದದ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಈ ದಾಖಲೆ ಬರೆದರು. ರಶೀದ್ ಖಾನ್, ಕರೀಂ ಜನ್ನತ್, ಗುಲ್ಬದಿನ್ ನೈಬ್ ಅವರು ಈ ಬಾರಿ ಕಮಿನ್ಸ್ ಅವರ ಹ್ಯಾಟ್ರಿಕ್ ಗಳಿಗೆ ಬಲಿಯಾದವರು. ಈ ಹಿಂದಿನ ಬಾಂಗ್ಲಾ ವಿರುದ್ದದ ಪಂದ್ಯದಲ್ಲೂ ಕಮಿನ್ಸ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.

18ನೇ ಓವರ್ ಎಸೆತ ಕಮಿನ್ಸ್ ಕೊನೆಯ ಎಸೆತದಲ್ಲಿ ರಶೀದ್ ಖಾನ್ ಅವರನ್ನು ಔಟ್ ಮಾಡಿದರು. ಬಳಿಕ 20ನೇ ಓವರ್ ಎಸೆದ ಕಮಿನ್ಸ್ ಮೊದಲ ಎಸೆತದಲ್ಲಿ ಕರೀಂ ಜನ್ನತ್ ಅವರನ್ನು ಔಟ್ ಮಾಡಿದರು. ಎರಡನೇ ಎಸೆತದಲ್ಲಿ ಗುಲ್ಬದಿನ್ ನೈಬ್ ಅವರು ಕಮಿನ್ಸ್ ಗೆ ಬಲಿಯಾದರು. ಈ ಮೂಲಕ ಕಮಿನ್ಸ್ ಸತತ ಎರಡನೇ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದರು.
ವಿಶೇಷ ಎಂದರೆ 20ನೇ ಓವರ್ ನ ಮೂರನೇ ಎಸೆತದಲ್ಲೂ ಹ್ಯಾಟ್ರಿಕ್ ಪಡೆಯುವ ಅವಕಾಶ ಕಮಿನ್ಸ್ ಅವರಿಗಿತ್ತು. ಆದರೆ ನಂಗೆಯಲಿಯಾ ಖರೋಟೆ ಅವರು ಬಾರಿಸಿದ ಚೆಂಡನ್ನು ವಾರ್ನರ್ ಡ್ರಾಪ್ ಮಾಡಿದರು.

ಪ್ಯಾಟ್ ಕಮಿನ್ಸ್ ಒಂದೇ ಆವೃತ್ತಿಯ ಟಿ20 ವಿಶ್ವಕಪ್‌ ನಲ್ಲಿ ಎರಡು ಹ್ಯಾಟ್ರಿಕ್‌ ಗಳನ್ನು ಪಡೆದ ಮೊದಲ ಬೌಲರ್ ಆಗಿದ್ದಾರೆ.
ಅವರು ಈಗ ಸತತ ಟಿ20 ಪಂದ್ಯಗಳಲ್ಲಿ ಎರಡು ಹ್ಯಾಟ್ರಿಕ್‌ ಗಳನ್ನು ಪಡೆದ ಏಕೈಕ ಬೌಲರ್ ಆಗಿದ್ದಾರೆ.
ಎರಡೂ ಹ್ಯಾಟ್ರಿಕ್‌ ಗಳು ಕಮಿನ್ಸ್‌ಗೆ ಎರಡು ಓವರ್‌ಗಳಲ್ಲಿ ಬಂದವು.


ಪ್ಯಾಟ್ ಕಮಿನ್ಸ್ ಈಗ ಹ್ಯಾಟ್ರಿಕ್ ಗಳ ಹ್ಯಾಟ್ರಿಕ್ ಪಡೆಯುವ ಅವಕಾಶ ಹೊಂದಿದ್ದಾರೆ. ಭಾರತ ವಿರುದ್ಧದ ಮುಂದಿನ ಪಂದ್ಯದಲ್ಲಿ ಅವರಿಗೆ ಈ ಅವಕಾಶವಿದೆ.

 

Latest Indian news

Popular Stories