ಕಾರವಾರ: ಹೊನ್ನಾವರ ತಾಲೂಕಿನ ಗೇರುಸೊಪ್ಪ ಬಳಿ ಗೋಳಿಮಕ್ಕಿ ಎಂಬಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿದೆ. ತುಮಕೂರಿನ ಪ್ರವಾಸಿ ಬಸ್ ಎಂದು ತಿಳಿದು ಬಂದಿದೆ.
ಬಸ್ ನಲ್ಲಿದ್ದ ಗಾಯಗೊಂಡವರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೊನ್ನಾವರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಈ ಅಪಘಾತದಲ್ಲಿ ಮೃತಪಟ್ಟವರ ವಿವರ ಇಂತಿದೆ. ಲೋಕೇಶ ತಂದೆ ರಂಗಮಯ್ಯ ( 26) ಬಸ್ ಚಾಲಕನಾಗಿದ್ದು, ತುಮಕೂರು ಮಧುಗಿರಿ ತಾಲೂಕ ಕೈಮಾರ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ . ರುದ್ರೇಶ್ ಗಂಗಾಧರಾಯ್ಯ (38) ಚಿಕ್ಕಬಳ್ಳಾಪುರ ಜಿಲ್ಲೆ , ಗೌರಿ ಬಿದನೂರು ತಾಲೂಕಿನ ಹಿರೆಬಿದನೂರು ಗ್ರಾಮದವರು ಎಂದು ತಿಳಿದು ಬಂದಿದೆ.